⚡ಟ್ರೆಂಡಿಂಗ್ಸ್

ಯುವ ನಾಯಕ ಮೈಲಾರಪ್ಪ ಚಳ್ಳಮರದ ಗೆ ಕಾಂಗ್ರೆಸ್‌ನಲ್ಲಿ ಉಜ್ವಲ ಭವಿಷ್ಯ : ಶಾಸಕ ಜಿ.ಎಸ್. ಪಾಟೀಲ

ಯುವ ನಾಯಕ ಮೈಲಾರಪ್ಪ ಚಳ್ಳಮರದ ಗೆ ಕಾಂಗ್ರೆಸ್‌ನಲ್ಲಿ ಉಜ್ವಲ ಭವಿಷ್ಯ : ಶಾಸಕ ಜಿ.ಎಸ್. ಪಾಟೀಲ
50 ವರ್ಷದ ರಾಜಕೀಯ ಬದುಕಿನಲ್ಲೇ ಹೃದಯಸ್ಪರ್ಶಿ ಕಾರ್ಯಕ್ರಮ : ಶಾಸಕ ಜಿ.ಎಸ್. ಪಾಟೀಲ ಭಾವುಕ ನುಡಿ

ನರೇಗಲ್‌ನಲ್ಲಿ ಐತಿಹಾಸಿಕ ಸಮಾವೇಶ : “ಗುಂಡುಕಲ್ಲಿದ್ದ ಮೈಲಾರಪ್ಪನನ್ನು ಕೆತ್ತಿ ಮೂರ್ತಿ ಮಾಡಿದ್ದೇವೆ” – ಶಾಸಕ ಪಾಟೀಲ

ಮೈಲಾರಪ್ಪ ಚಳ್ಳಮರದ ರಾಜಕೀಯ ಬೆಳವಣಿಗೆಗೆ ಕಾಂಗ್ರೆಸ್ ವೇದಿಕೆ : ಶಾಸಕ ಜಿ.ಎಸ್. ಪಾಟೀಲ

ಯುವ ನಾಯಕತ್ವಕ್ಕೆ ಕಾಂಗ್ರೆಸ್ ಮನ್ನಣೆ : ಮೈಲಾರಪ್ಪ ಚಳ್ಳಮರದ ಕುರಿತು ಶಾಸಕ ಪಾಟೀಲ ಪ್ರಶಂಸೆ

ನರೇಗಲ್ ಕಾರ್ಯಕ್ರಮ ರಾಜಕೀಯ ಇತಿಹಾಸದಲ್ಲಿ ಹೊಸ ಅಧ್ಯಾಯ : ಶಾಸಕ ಜಿ.ಎಸ್. ಪಾಟೀಲ


ಸಂವಿಧಾನಕ್ಕೆ ಧಕ್ಕೆ ತಂದರೆ ಜನರೇ ತಕ್ಕ ಪಾಠ ಕಲಿಸುತ್ತಾರೆ : ಶಾಸಕ ಜಿ.ಎಸ್. ಪಾಟೀಲ

ನರೇಗಲ್‌ನಲ್ಲಿ ಅಂಬೇಡ್ಕರ್–ಬಾಬು ಜಗಜೀವನ್ ರಾಮ್ ಜಯಂತಿ ಅದ್ದೂರಿ ಆಚರಣೆ
ಯುವ ನಾಯಕ ಮೈಲಾರಪ್ಪ ಚಳ್ಳಮರದ ಸಂಘಟನಾ ಶಕ್ತಿಗೆ ಶಾಸಕ ಪಾಟೀಲ ಮೆಚ್ಚುಗೆ

ನರೇಗಲ್, ಮೇ 17 :
ಭಾರತದ ಸಂವಿಧಾನವು ದೇಶದ ಪ್ರಜೆಗಳ ಹಕ್ಕು, ಸಮಾನತೆ ಮತ್ತು ಸ್ವಾತಂತ್ರ್ಯದ ಭದ್ರಕೋಟೆಯಾಗಿದ್ದು, ಅದನ್ನು ದುರ್ಬಲಗೊಳಿಸಲು ಯತ್ನಿಸುವವರ ವಿರುದ್ಧ ಜನತೆ ಪ್ರಜಾಪ್ರಭುತ್ವದ ಮಾರ್ಗದಲ್ಲೇ ತಕ್ಕ ಉತ್ತರ ನೀಡಲಿದ್ದಾರೆ ಎಂದು ರೋಣ ಕ್ಷೇತ್ರದ ಶಾಸಕ ಜಿ.ಎಸ್. ಪಾಟೀಲ ಎಚ್ಚರಿಸಿದರು.

ಪಟ್ಟಣದ ಜೈ ಭೀಮ ಸೇನಾ ರಾಜ್ಯ ಸಂಘರ್ಷ ಸಮಿತಿ, ಡಾ. ಬಿ.ಆರ್. ಅಂಬೇಡ್ಕರ್ ಅಭಿಮಾನಿ ಬಳಗ ಹಾಗೂ ಶಾಸಕ ಜಿ.ಎಸ್. ಪಾಟೀಲ ಅಭಿಮಾನಿ ಬಳಗಗಳ ಸಹಯೋಗದಲ್ಲಿ ಶನಿವಾರ ಸಂಜೆ ಆಯೋಜಿಸಿದ್ದ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ 135ನೇ ಜಯಂತಿ ಹಾಗೂ ಮಾಜಿ ಉಪಪ್ರಧಾನಿ ಡಾ. ಬಾಬು ಜಗಜೀವನ್ ರಾಮ್ ಅವರ 119ನೇ ಜಯಂತಿ ಸಮಾರಂಭದಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.

ದೇಶದಲ್ಲಿ ಸಮಾನತೆ ಮತ್ತು ಸಾಮಾಜಿಕ ನ್ಯಾಯ ಸ್ಥಾಪಿಸಲು ಡಾ. ಬಾಬಾಸಾಹೇಬ ಅಂಬೇಡ್ಕರ್ ರಚಿಸಿದ ಸಂವಿಧಾನವೇ ಪ್ರಮುಖ ಕಾರಣವಾಗಿದೆ. ಹಿಂದೆ ಸಮಾಜದಲ್ಲಿ ಕಂಡುಬಂದ ಅನ್ಯಾಯ, ಅಸಮಾನತೆ ಮತ್ತು ತಾರತಮ್ಯಗಳು ಇಂದು ಕಡಿಮೆಯಾಗಿರುವುದು ಸಂವಿಧಾನದ ಶಕ್ತಿಯಿಂದಲೇ ಸಾಧ್ಯವಾಗಿದೆ ಎಂದು ಹೇಳಿದರು.

ಕೆಲವರು ಸಂವಿಧಾನ ಬದಲಾವಣೆ ಕುರಿತು ಹೇಳಿಕೆ ನೀಡುತ್ತಿರುವುದು ವಿಷಾದನೀಯ. ದೇಶದ ಜನತೆ ಕಳೆದ ಏಳು ದಶಕಗಳಿಂದ ಸಂವಿಧಾನದ ಆಶಯದಂತೆ ಬದುಕುತ್ತಿದ್ದು, ಮುಂದಿನ ಪೀಳಿಗೆಯೂ ಅದನ್ನು ಉಳಿಸಿ ಬೆಳೆಸುವ ಹೊಣೆ ಹೊತ್ತುಕೊಳ್ಳಬೇಕು ಎಂದು ಹೇಳಿದರು.

ಯುವ ನಾಯಕರು ಸಮಾಜ ನಿರ್ಮಾಣದಲ್ಲಿ ಮುಂದೆ ಬರಬೇಕೆಂಬ ಉದ್ದೇಶದಿಂದ ಕಾರ್ಯಕ್ರಮದ ಉದ್ಘಾಟನೆ ಹಾಗೂ ದೀಪ ಬೆಳಗುವ ಕಾರ್ಯವನ್ನು ಯುವಕರಿಂದಲೇ ನೆರವೇರಿಸಲಾಗಿದೆ ಎಂದರು.

“ಮೈಲಾರಪ್ಪ ಚಳ್ಳಮರ ಮುಂದಿನ ದಿನಗಳಲ್ಲಿ ಉನ್ನತ ಹುದ್ದೆಗೇರಲಿದ್ದಾರೆ”

ಜೈ ಭೀಮ ಸೇನಾ ರಾಜ್ಯ ಸಂಘರ್ಷ ಸಮಿತಿ ರಾಜ್ಯ ಉಪಾಧ್ಯಕ್ಷ ಹಾಗೂ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರಾಗಿರುವ ಮೈಲಾರಪ್ಪ ವೀ. ಚಳ್ಳಮರದ ಅವರ ಸಂಘಟನಾ ಸಾಮರ್ಥ್ಯ ಶ್ಲಾಘನೀಯವಾಗಿದೆ. ಸಾವಿರಾರು ಜನರನ್ನು ಒಂದೇ ವೇದಿಕೆಯಲ್ಲಿ ಸೇರಿಸಿ ಯಶಸ್ವಿ ಕಾರ್ಯಕ್ರಮ ಆಯೋಜಿಸಿರುವುದು ಅವರ ನಾಯಕತ್ವದ ಸಾಕ್ಷಿಯಾಗಿದೆ ಎಂದು ಶಾಸಕ ಪಾಟೀಲ ಹೇಳಿದರು.

“ಗುಂಡುಕಲ್ಲಿನಂತಿದ್ದ ಮೈಲಾರಪ್ಪ ಇಂದು ಕೆತ್ತಿದ ಮೂರ್ತಿಯಂತಾಗಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಅವರು ಇನ್ನೂ ಉನ್ನತ ಸ್ಥಾನಮಾನಗಳನ್ನು ಅಲಂಕರಿಸಲಿದ್ದಾರೆ” ಎಂದು ಭರವಸೆ ವ್ಯಕ್ತಪಡಿಸಿದರು.

ಸಂವಿಧಾನ ಉಳಿಸುವ ಜವಾಬ್ದಾರಿ ಯುವಕರ ಮೇಲಿದೆ

ರೋಣ ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಮಿಥುನ್ ಜಿ. ಪಾಟೀಲ ಮಾತನಾಡಿ, ಡಾ. ಅಂಬೇಡ್ಕರ್ ಸಂವಿಧಾನದ ಮೂಲಕ ಶೋಷಿತ ವರ್ಗಗಳಿಗೆ ಬದುಕಿನ ಭದ್ರತೆ ಒದಗಿಸಿದ್ದಾರೆ. ಸಂವಿಧಾನದ ಮೌಲ್ಯಗಳನ್ನು ಉಳಿಸುವುದು ಪ್ರತಿಯೊಬ್ಬರ ಕರ್ತವ್ಯ ಎಂದರು.

ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಅಕ್ಷಯ ಐ. ಪಾಟೀಲ ಮಾತನಾಡಿ, ವಿಶ್ವದಲ್ಲೇ ಅತ್ಯುತ್ತಮ ಸಂವಿಧಾನ ಭಾರತದದೇ ಆಗಿದ್ದು, ದೇಶದ ಏಕತೆ ಮತ್ತು ಪ್ರಜೆಗಳ ಹಕ್ಕುಗಳ ರಕ್ಷಣೆಗೆ ಅದು ಜೀವನಾಡಿಯಾಗಿದೆ ಎಂದರು.

ಗದಗ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಗೌಡ ಎಚ್. ಪಾಟೀಲ ಮಾತನಾಡಿ, ಸಂವಿಧಾನದ ಪೀಠಿಕೆಯಲ್ಲಿ ಭ್ರಾತೃತ್ವಕ್ಕೆ ನೀಡಿರುವ ಮಹತ್ವ ಸಮಾಜದ ಏಕತೆಗಾಗಿ ಅತ್ಯಗತ್ಯವಾಗಿದೆ ಎಂದು ಹೇಳಿದರು.

ಬಾಗಲಕೋಟೆಯ ಯುವ ಮುಖಂಡ ವಿನಯ ಆರ್. ತಿಮ್ಮಾಪುರ ಮಾತನಾಡಿ, ಸಮಾಜದ ಅಭಿವೃದ್ಧಿಗಾಗಿ ಸಾಮಾನ್ಯ ಕಾರ್ಯಕರ್ತನಾಗಿ ಸೇವೆ ಸಲ್ಲಿಸುವ ಸಂಕಲ್ಪ ವ್ಯಕ್ತಪಡಿಸಿದರು.

ಐದು ಸಾವಿರಕ್ಕೂ ಅಧಿಕ ಜನರ ಸೇರ್ಪಡೆ

ಕಾರ್ಯಕ್ರಮದಲ್ಲಿ ರೋಣ ಬೂದೀಶ್ವರಮಠದ ಡಾ. ವಿಶ್ವನಾಥ ಮಹಾಸ್ವಾಮಿಗಳು, ರಹಿಮಾನ್ ಶಾವಲಿ ದರ್ಗಾದ ಸಯ್ಯದ್ ಮಂಜೂರ ಹುಸೇನ ಶ್ಯಾವಲಿ ಶರಣರು, ಇಟಗಿಯ ಶಿವಶರಣ ಗೆದಿಗೆಪ್ಪಜ್ಜನವರು ಹಾಗೂ ಸೂಡಿ ಮರುಳು ಸಿದ್ದೇಶ್ವರ ಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು.

ಈ ಸಂದರ್ಭದಲ್ಲಿ ಸರ್ಕಾರಿ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಮಾದಿಗ ಸಮುದಾಯದ ಗಣ್ಯರಿಗೆ ಸನ್ಮಾನ ಹಾಗೂ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು.

ನರೇಗಲ್ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಂದ ಸುಮಾರು ಐದು ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು. ಬಳಿಕ ಸಾಂಸ್ಕೃತಿಕ ಹಾಗೂ ರಸಮಂಜರಿ ಕಾರ್ಯಕ್ರಮಗಳು ನಡೆದವು.


---
ಬಾಕ್ಸ್ ಸುದ್ದಿ

ಶಾಸಕ ಜಿ.ಎಸ್. ಪಾಟೀಲರಿಗೆ “ಜೈ ಭೀಮ್ ರತ್ನ” ರಾಜ್ಯ ಪ್ರಶಸ್ತಿ

ದಲಿತ ಸಮುದಾಯದ ಅಭಿವೃದ್ಧಿ, ಯುವಕರಿಗೆ ಉದ್ಯೋಗ ಸೃಷ್ಟಿ, ಪರಿಸರ ಹಾಗೂ ಜಲ ಸಂರಕ್ಷಣೆಯಲ್ಲಿ ತೋರಿದ ಕಾಳಜಿ ಮತ್ತು ಜನಸಾಮಾನ್ಯರೊಂದಿಗೆ ಬೆರೆತು ಸೇವೆ ಸಲ್ಲಿಸಿರುವ ಹಿನ್ನೆಲೆಯಲ್ಲಿ ರೋಣ ಶಾಸಕ ಜಿ.ಎಸ್. ಪಾಟೀಲ ಅವರಿಗೆ “ಜೈ ಭೀಮ್ ರತ್ನ” ರಾಜ್ಯ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.

ಈ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿರುವ ಬೈಲಪ್ಪ ತಳವಾರ, ಬಿ.ವಿ. ಗೌಡರ, ಅರುಣ ಕುಲಕರ್ಣಿ, ವಿ.ಎ. ಕುಂಬಾರ, ಈಶಯ್ಯ ಕಲ್ಲೂರ, ಹನಮಪ್ಪ ಅಬ್ಬಿಗೆರಿ, ಸುರೇಶ ಹಳ್ಳಿಕೇರಿ ಹಾಗೂ ಚಂದ್ರು ಎಂ. ರಾಥೋಡ್ ಅವರನ್ನು ಸನ್ಮಾನಿಸಲಾಯಿತು.


---

Post a Comment

Previous Post Next Post
Loading...

Breaking News

ಭ್ರಷ್ಟರ ಬೇಟೆ
ಜಿಲ್ಲಾ ಸುದ್ದಿ is loading...