ವಯೋ ನಿವೃತ್ತ ಶಿಕ್ಷಕಿ ಡಿ.ಬಿ. ಕೊಂಗವಾಡರಿಗೆ ಕೆಎಚ್ ಬಿ ಬಡಾವಣೆ ನಿವಾಸಿಗಳಿಂದ ಗೌರವ ಸಮರ್ಪಣೆ
ಗದಗ, ಮೇ 17 :
ಗಜೇಂದ್ರಗಡ ತಾಲೂಕಿನಲ್ಲಿ ದೀರ್ಘಕಾಲ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ವಯೋ ನಿವೃತ್ತಿ ಹೊಂದಿದ ಶ್ರೀಮತಿ ಡಿ.ಬಿ. ಕೊಂಗವಾಡ ಅವರಿಗೆ ನಗರದ ಮುಕ್ಕಣ್ಣೇಶ್ವರ ದೇವಸ್ಥಾನದಲ್ಲಿ ಭಾನುವಾರ ನವನಗರ ಕ್ಷೇಮಾಭಿವೃದ್ಧಿ ಸಂಘ ಹಾಗೂ ಕೆ ಎಚ್ ಬಿ ಬಡಾವಣೆ ನಿವಾಸಿಗಳಿಂದ ಗೌರವ ಸಮರ್ಪಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಿ.ಎಸ್. ತಳವಾರ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮಹಾಂತಯ್ಯ ಕಲ್ಮಠ, ಸಿದ್ದಲಿಂಗಪ್ಪ ಸಿ. ಬಸರಿ, ಶರಣು ಕೊಂಗವಾಡ, ಬಸವರಾಜ ಕೊಂಗವಾಡ, ವಿಜಯಲಕ್ಷ್ಮೀ ಕೊಂಗವಾಡ, ಎ.ಎಂ. ವಡಗೇರಿ, ಎಸ್.ಎಚ್. ಶೆಟ್ಟಿನಾಯಕರ, ಎಸ್.ವಿ. ಹುಬ್ಬಳ್ಳಿ, ಆರ್.ಎಫ್. ಲೋಟಗೇರಿ, ಎಚ್.ವೈ. ಬಸರಿ, ಚುಂಚಾ ಸರ್ ಹಾಗೂ ಶ್ರೀಮತಿ ಪರಿಮಳ ಸಾಸ್ವಿಹಳ್ಳಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಮಹಾಂತಯ್ಯ ಕಲ್ಮಠ, “ಕೆಎಚ್‌ಬಿ ಬಡಾವಣೆಯಲ್ಲಿ ಇಂತಹ ಆದರ್ಶ ಶಿಕ್ಷಕಿಯರು ಇರುವದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯ. ಅವರು ಮಕ್ಕಳ ಶಿಕ್ಷಣ ಮತ್ತು ಶ್ರೇಯಸ್ಸಿಗಾಗಿ ಅಪಾರ ಸೇವೆ ಸಲ್ಲಿಸಿದ್ದಾರೆ” ಎಂದು ಹೇಳಿದರು.
ಶಿವಾನಂದ ಹುಬ್ಬಳ್ಳಿ ಮಾತನಾಡಿ, “ಶಿಕ್ಷಕರ ಸೇವೆ ಅಮೂಲ್ಯವಾದದ್ದು. ಸಮಾಜ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ” ಎಂದರು.
ಶರಣಪ್ಪ ಕೊಂಗವಾಡ ಮಾತನಾಡಿ, ತಮ್ಮ ಅಕ್ಕನವರ ಸೇವಾ ಮನೋಭಾವನೆ, ಶಿಕ್ಷಣ ಕ್ಷೇತ್ರದ ನಿಷ್ಠೆ ಹಾಗೂ ವಿದ್ಯಾರ್ಥಿಗಳ ಬೆಳವಣಿಗೆಗೆ ನೀಡಿದ ಕೊಡುಗೆಯನ್ನು ಸ್ಮರಿಸಿದರು.
ಗೌರವ ಸ್ವೀಕರಿಸಿ ಮಾತನಾಡಿದ ಶ್ರೀಮತಿ ಡಿ.ಬಿ. ಕೊಂಗವಾಡ, “ಶಿಕ್ಷಕರ ವೃತ್ತಿ ಅತ್ಯಂತ ಪವಿತ್ರವಾದದ್ದು. ಮಕ್ಕಳ ಉಜ್ವಲ ಭವಿಷ್ಯ ರೂಪಿಸುವುದು ಶಿಕ್ಷಕರ ಪ್ರಮುಖ ಜವಾಬ್ದಾರಿ” ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಡಿ.ಎಸ್. ತಳವಾರ ಮಾತನಾಡಿ, “ಶ್ರೀಮತಿ ಕೊಂಗವಾಡ ಅವರು ಸಮಯ ಪ್ರಜ್ಞೆ, ಸೇವಾ ಮನೋಭಾವ ಹಾಗೂ ವಿದ್ಯಾರ್ಥಿಗಳ ಹಿತಾಸಕ್ತಿಗೆ ಆದ್ಯತೆ ನೀಡುವ ಮೂಲಕ ಆದರ್ಶ ಶಿಕ್ಷಕಿಯಾಗಿ ಗುರುತಿಸಿಕೊಂಡಿದ್ದಾರೆ” ಎಂದು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ಅವರ ಮಕ್ಕಳಾದ ಕಿರಣ್, ಸುನಿಲ್, ನವೀನ್, ಸೊಸೆ ವೀಣಾ ಸೇರಿದಂತೆ ನವನಗರ ಕ್ಷೇಮಾಭಿವೃದ್ಧಿ ಸಂಘದ ನಿರ್ದೇಶಕರು ಹಾಗೂ ಸದಸ್ಯರಾದ ಉಮೇಶ್ ದಲಬಂಜನ, ಪಂಚಾಕ್ಷರಿ ಹೊಂಬಾಳಮಠ, ರಾಜಶೇಖರ್ ಕರಡಿ, ಎಸ್.ವಿ. ಹುಬ್ಬಳ್ಳಿ, ಸಿದ್ಧಪ್ಪ ಸತ್ತಿಗೇರಿ, ಮಲ್ಲಿಕಾರ್ಜುನ ಚಳಗೇರಿ, ಮುಜಾವರ್, ನಾಗರಾಜ ಪರಸನಾಯಕರ, ಬಸನಗೌಡ ಅಯ್ಯನಗೌಡರ, ಶಿವಕುಮಾರ ನಾಯಕ, ಯುವರಾಜ ಬಡಿಗೇರ, ಅಶೋಕ ಕರವೇರಶೆಟ್ಟರ, ಸುರೇಶ ಹಿರೇಮಠ, ವಿ ಜಿ ಹಿರೇಮಠ , ಕೆಎಚ್‌ಬಿ ಬಡಾವಣೆಯ ನಿವಾಸಿಗಳು, ಕುಟುಂಬಸ್ಥರು ಹಾಗೂ ಗುರು ವೃಂದದವರು ಉಪಸ್ಥಿತರಿದ್ದರು.
ಕಾರ್ಯಕ್ರಮದ ನಿರೂಪಣೆಯನ್ನು ಬೆಟಗೇರಿ ಗುರುಗಳು ನೆರವೇರಿಸಿದರು.
Post a Comment