ಕಾಲಾತೀತ ಕ್ರಾಂತಿಯೋಗಿ,ವಿಶ್ವಮಾನ್ಯ ಬಸವಣ್ಣ: ಅಂದಿಗೆ ದರ್ಶನ, ಇಂದಿಗೆ ದಿವ್ಯೌಷಧ
- ಅಮೀರನಾಯಕ (ಕಲ್ಲಿಗನೂರ), ಗದಗ
("ಜಗತ್ತಿನ ನೈತಿಕ ಇತಿಹಾಸಕ್ಕೆ ಬುದ್ಧ-ಬಸವ-ಅಂಬೇಡ್ಕರ್ ಎಂಬ ಮೂವರು ಮಹಾಮಾನವರ ಚಿಂತನೆಗಳೇ ಭದ್ರ ಬುನಾದಿ. ಹನ್ನೆರಡನೇ ಶತಮಾನದಲ್ಲಿ ಬಸವಣ್ಣನವರು ಬಿತ್ತಿದ ಸಮಾನತೆಯ ಆಶಯಗಳು ಕೇವಲ ಇತಿಹಾಸದ ಪುಟಗಳಲ್ಲ, ಬದಲಾಗಿ ಇಂದಿನ ಅಸ್ತವ್ಯಸ್ತ ಸಮಾಜಕ್ಕೆ ಬೇಕಿರುವ ದಿವ್ಯೌಷಧಗಳಾಗಿವೆ. ಏಪ್ರಿಲ್ 20ರ ಬಸವ ಜಯಂತಿಯ ಈ ವಿಶೇಷ ಸಂದರ್ಭದಲ್ಲಿ, ವಚನಗಳ ಬೆಳಕಿನಲ್ಲಿ ಬಸವ ತತ್ವದ ಸಾರ್ವಕಾಲಿಕ ಪ್ರಸ್ತುತತೆಯನ್ನು ಶೋಧಿಸುವ ಲೇಖನವಿದು.")
ಭಾರತದ ನೈತಿಕ ಚಿಂತನೆಯ ಸುದೀರ್ಘ ಇತಿಹಾಸದಲ್ಲಿ ಮೂರು ದೀಪಸ್ತಂಭಗಳು ಕಾಲದ ಅಲೆಗಳಿಗೆ ಮಣಿಯದೆ ಬೆಳಗುತ್ತಿವೆ. ಅನ್ಯಾಯದ ವಿರುದ್ಧ ಅಹಿಂಸೆಯ ಹಾದಿ ತೋರಿದ ಗೌತಮ ಬುದ್ಧ, ಆ ಹಾದಿಯನ್ನು ಜನಸಾಮಾನ್ಯರ ಕಾಯಕ ಮತ್ತು ಭಾಷೆಯಲ್ಲಿ ಮರುರೂಪಿಸಿದ ಜಗಜ್ಯೋತಿ ಬಸವಣ್ಣ, ಹಾಗೂ ಅದೇ ಸಮಾನತೆಯ ಆಶಯಕ್ಕೆ ಸಂವಿಧಾನದ ಶಕ್ತಿ ನೀಡಿದ ಡಾ. ಬಿ.ಆರ್. ಅಂಬೇಡ್ಕರ್. ಈ ಮೂವರೂ ಬೇರೆ ಬೇರೆ ಕಾಲಘಟ್ಟದವರಾದರೂ, ಅವರ ಗುರಿ ಮಾತ್ರ ಒಂದೇ ಆಗಿತ್ತು: 'ಮಾನವ ಘನತೆಯ ಮರುಸ್ಥಾಪನೆ'.
ಬಸವಣ್ಣನವರ ಬದುಕು ಕೇವಲ ವ್ಯಕ್ತಿಯ ಚರಿತ್ರೆಯಲ್ಲ, ಅದು ಒಂದು ಯುಗದ ಪರಿವರ್ತನೆ. 12ನೇ ಶತಮಾನದಲ್ಲಿ ಇಂದಿನ ವಿಜಯಪುರ ಜಿಲ್ಲೆಯ ಬಾಗೇವಾಡಿಯಲ್ಲಿ ಮಾದರಸ ಮತ್ತು ಮಾದಲಾಂಬಿಕೆಯ ಪುತ್ರನಾಗಿ ಜನಿಸಿದ ಬಸವಣ್ಣನವರು, ಬಾಲ್ಯದಲ್ಲೇ ಸಂಪ್ರದಾಯದ ಸಂಕೋಲೆಗಳನ್ನು ಪ್ರಶ್ನಿಸಿದವರು. ಉಪನಯನದಂತಹ ಆಚರಣೆಗಳನ್ನು ತಿರಸ್ಕರಿಸಿ ಕೂಡಲಸಂಗಮಕ್ಕೆ ತೆರಳಿದ ಅವರು, ಅಲ್ಲಿ ಜ್ಞಾನಾರ್ಜನೆ ಮಾಡಿ ಕಲ್ಯಾಣಕ್ಕೆ ಬಂದರು. ಕಲ್ಯಾಣದ ಬಿಜ್ಜಳ ರಾಜನ ಆಸ್ಥಾನದಲ್ಲಿ ಭಂಡಾರಿಯಾಗಿ (ಹಣಕಾಸು ಮಂತ್ರಿ) ಕಾರ್ಯನಿರ್ವಹಿಸಿದರೂ, ಅವರ ಮನಸ್ಸು ಮಾತ್ರ ತುಳಿತಕ್ಕೆ ಒಳಗಾದವರ ಉದ್ಧಾರಕ್ಕಾಗಿ ತುಡಿಯುತ್ತಿತ್ತು. ಅಧಿಕಾರ ಮತ್ತು ಸಂಪತ್ತಿನ ನಡುವೆಯೂ ಸಾಮಾನ್ಯರಲ್ಲಿ ಸಾಮಾನ್ಯರಾಗಿ ಬದುಕಿದ ಅವರು, ಸಮಾಜದ ಕಟ್ಟಕಡೆಯ ಮನುಷ್ಯನಿಗೂ ಧಾರ್ಮಿಕ ಮತ್ತು ಸಾಮಾಜಿಕ ಸಮಾನತೆ ದೊರೆಯಬೇಕೆಂದು ಹಂಬಲಿಸಿದವರು.
ಬಸವಣ್ಣ ಎಂಬ ಚೇತನ ಹನ್ನೆರಡನೇ ಶತಮಾನದ ಇತಿಹಾಸಕ್ಕೆ ಮಾತ್ರ ಸೀಮಿತವಲ್ಲ; ಅವರು ಪ್ರತಿಕ್ಷಣವೂ ನಮ್ಮ ನಡುವೆ ಪ್ರಜ್ವಲಿಸಬೇಕಾದ ನೈತಿಕ ಜ್ಯೋತಿ. ಅವರ ಚಿಂತನೆಗಳನ್ನು ವಚನಗಳ ಬೆಳಕಿನಲ್ಲಿ ವಿಶ್ಲೇಷಿಸಿದಾಗ ಅದರ ಸಾರ್ವಕಾಲಿಕ ಪ್ರಸ್ತುತತೆ ನಮಗೆ ಅರ್ಥವಾಗುತ್ತದೆ.
೧. ದೇಗುಲದ ಪರಿಕಲ್ಪನೆಯ ಬದಲಾವಣೆ: ಆಧ್ಯಾತ್ಮಿಕ ಪ್ರಜಾಪ್ರಭುತ್ವ
ಬಸವಣ್ಣನವರು ತಂದ ಅತಿದೊಡ್ಡ ಕ್ರಾಂತಿ ಎಂದರೆ ಧರ್ಮವನ್ನು ಮಠ-ಮಾನ್ಯಗಳಿಂದ ಹೊರತಂದು ಮನುಷ್ಯನ ಅಂತರಂಗದಲ್ಲಿ ಪ್ರತಿಷ್ಠಾಪಿಸಿದ್ದು. ಅಂದು ದೇವಾಲಯಗಳು ಶೋಷಣೆಯ ಮತ್ತು ಅಧಿಕಾರದ ಕೇಂದ್ರಗಳಾಗಿದ್ದವು. ಇದನ್ನು ಪ್ರಶ್ನಿಸಿದ ಬಸವಣ್ಣನವರು ಹಾಡಿದ್ದು.
"ಉಳ್ಳವರು ಶಿವಾಲಯವ ಮಾಡುವರು,
ನಾನೇನು ಮಾಡುವೆ ಬಡವನಯ್ಯಾ?
ಎನ್ನ ಕಾಲೇ ಕಂಬ, ದೇಹವೇ ದೇಗುಲ,
ಶಿರವೇ ಹೊನ್ನ ಕಳಶವಯ್ಯಾ.
ಕೂಡಲಸಂಗಮದೇವ ಕೇಳಯ್ಯಾ,
ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ."
Post a Comment