ದೇಶದಲ್ಲಿ LPG ಬಿಕ್ಕಟ್ಟಿನಿಂದಾಗಿ ಸಂಕಷ್ಟ ಎದುರಿಸುತ್ತಿರುವ ಬೆಂಗಳೂರಿನ PGಗಳಿಗೆ ಪ್ರತಿದಿನ ಕನಿಷ್ಠ 500 ಎಲ್‌ಪಿಜಿ ಸಿಲಿಂಡರ್‌ಗಳನ್ನು ನೀಡುವಂತೆ ಸರ್ಕಾರವನ್ನು ಒತ್ತಾಯಿಸಲು ಪಿಜಿ ಮಾಲೀಕರ ಕಲ್ಯಾಣ ಸಂಘದ ಒಕ್ಕೂಟ ಸಭೆ ನಡೆಸಿ ನಿರ್ಧಾರಕ್ಕೆ ಬಂದಿದೆ. LPG ಪೂರೈಕೆಯಲ್ಲಿನ ವ್ಯತ್ಯಯದಿಂದಾಗಿ ರಾಜಧಾನಿಯಲ್ಲಿನ ಸುಮಾರು 15ಸಾವಿರ PGಗಳಲ್ಲಿ ಆಹಾರ ವಿತರಣೆಯಲ್ಲಿ ಉಂಟಾದ ವ್ಯತ್ಯಯಗಳ ಬೆನ್ನಲ್ಲೇ, ಈ ಸಮಸ್ಯೆಗೆ ಸೂಕ್ತ ಪರಿಹಾರಕ್ಕಾಗಿ ತಕ್ಷಣವೃ ಸಿಲಿಂಡರ್ ಸರಬರಾಜು ಮಾಡುವಂತೆ ಬೇಡಿಕೆಯಿಟ್ಟಿದೆ.
ಬೆಂಗಳೂರು: ಮಧ್ಯಪ್ರಾಚ್ಯದಲ್ಲಿನ ಸಂಘರ್ಷದಿಂದಾಗಿ ದೇಶದಲ್ಲಿ ಎದುರಾಗಿರುವ LPG ಬಿಕ್ಕಟ್ಟಿನ ಪರಿಣಾಮ PGಗಳ ಮೇಲೂ ಬಿದ್ದಿದೆ. ಈ ಹಿನ್ನಲೆಯಲ್ಲಿ LPG ಕೊರತೆಯನ್ನು ನೀಗಿಸಲು ಪೇಯಿಂಗ್ ಗೆಸ್ಟ್ ವಸತಿಗಾಗಿ ಪ್ರತಿದಿನ ಕನಿಷ್ಠ 500 LPG ಸಿಲಿಂಡರ್‌ಗಳನ್ನು ಮೀಸಲಿಡುವಂತೆ ಸರ್ಕಾರವನ್ನು ಒತ್ತಾಯಿಸಲು ಪಿಜಿ ಮಾಲೀಕರ ಕಲ್ಯಾಣ ಒಕ್ಕೂಟ ನಿರ್ಧರಿಸಿದೆ.

Post a Comment