ಗ್ರೇಟರ್ ಬೆಂಗಳೂರು ಚುನಾವಣೆಯು ಇನ್ನೆರಡು ತಿಂಗಳಲ್ಲಿ ಘೋಷಣೆಯಾಗಿದೆ. ಇದಕ್ಕೆ ಬಿಜೆಪಿ ತಯಾರಿ ನಡೆಸುತ್ತಿದ್ದು, ಪಾಲಿಕೆ, ವಿಧಾನಸಭಾವಾರು ಉಸ್ತುವಾರಿಗಳ ತಂಡ ರಚನೆ ಮಾಡಿದೆ. ಜತೆಗೆ ಕೇಂದ್ರ ಸಚಿವರು, ಸಂಸದರನ್ನು ಒಳಗೊಂಡ ರಾಜ್ಯ ತಂಡವನ್ನು ಸಿದ್ಧಪಡಿಸಿದೆ. ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು ಉಸ್ತುವಾರಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ. ಯಾರಿಗೆ ಯಾವ ಕ್ಷೇತ್ರ, ಪಾಲಿಕೆ ಜವಾಬ್ದಾರಿ? ಸಂಪೂರ್ಣ ವಿವರ ಇಲ್ಲಿದೆ.
ಬೆಂಗಳೂರು: ಮುಂಬರುವ ಗ್ರೇಟರ್ ಬೆಂಗಳೂರು ಪ್ರಾಧಿಕಾರದ 5 ಪಾಲಿಕೆಗಳ ಚುನಾವಣೆಗೆ ಬಿಜೆಪಿ ಸಜ್ಜಾಗುತ್ತಿದೆ. ಈ ನಿಟ್ಟಿನಲ್ಲಿ ಪಾಲಿಕೆ, ವಿಧಾನಸಭಾವಾರು ಉಸ್ತುವಾರಿಗಳನ್ನು ನೇಮಕ ಮಾಡಿದೆ. ಜತೆಗೆ ಚುನಾವಣಾ ಪ್ರಚಾರಕ್ಕೆ ರಾಜ್ಯ ತಂಡವನ್ನು ಘೋಷಣೆ ಮಾಡಿದೆ.

Post a Comment