⚡ಟ್ರೆಂಡಿಂಗ್ಸ್

ಯುವ ಘಟಕದ ಅಧ್ಯಕ್ಷರಾಗಿ ಶಿವಕುಮಾರ ಶಶಿಮಠ, ಮಹಿಳಾ ಘಟಕದ ಅಧ್ಯಕ್ಷೆಯಾಗಿ ಗೀತಾ ವಾಲಿ ಅವಿರೋಧ ಆಯ್ಕೆ

ವೀರಶೈವ ಲಿಂಗಾಯತ ಮಹಾಸಭೆ ತಾಲೂಕು ಘಟಕಕ್ಕೆ ಹೊಸ ಚೈತನ್ಯ

ಯುವ ಘಟಕದ ಅಧ್ಯಕ್ಷರಾಗಿ ಶಿವಕುಮಾರ ಶಶಿಮಠ, ಮಹಿಳಾ ಘಟಕದ ಅಧ್ಯಕ್ಷೆಯಾಗಿ ಗೀತಾ ವಾಲಿ ಅವಿರೋಧ ಆಯ್ಕೆ

ಗಜೇಂದ್ರಗಡ, ಜೂ.23: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ಗಜೇಂದ್ರಗಡ ತಾಲೂಕು ಘಟಕದ ಯುವ ಘಟಕದ ಅಧ್ಯಕ್ಷರಾಗಿ ಶಿವಕುಮಾರ ಶಶಿಮಠ ಹಾಗೂ ಮಹಿಳಾ ಘಟಕದ ಅಧ್ಯಕ್ಷೆಯಾಗಿ ಗೀತಾ ಶಶಿಧರ ವಾಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಪಟ್ಟಣದ ಮೈಸೂರುಮಠದಲ್ಲಿ ಸೋಮವಾರ ನಡೆದ ಮಹಾಸಭೆಯ ತಾಲೂಕು ಘಟಕದ ಸಭೆಯಲ್ಲಿ ಈ ಆಯ್ಕೆ ಪ್ರಕ್ರಿಯೆ ಜರುಗಿತು. ಸಮಾಜದ ಸಂಘಟನೆ ಮತ್ತು ಅಭಿವೃದ್ಧಿಗೆ ಸಮರ್ಪಿತವಾಗಿ ಕಾರ್ಯನಿರ್ವಹಿಸುವ ನಿಟ್ಟಿನಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದ್ದು, ಸಭೆಯಲ್ಲಿ ಸಮಾಜದ ಮುಖಂಡರು ಹಾಗೂ ಗಣ್ಯರು ಭಾಗವಹಿಸಿದ್ದರು.

ನೂತನ ಯುವ ಘಟಕದ ಅಧ್ಯಕ್ಷ ಶಿವಕುಮಾರ ಶಶಿಮಠ ಮಾತನಾಡಿ, “ತಾಲೂಕಿನಾದ್ಯಂತ ಯುವಕರನ್ನು ಸಂಘಟಿಸಿ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸುವುದು ನನ್ನ ಪ್ರಮುಖ ಗುರಿಯಾಗಿದೆ. ಹಿರಿಯರ ಮಾರ್ಗದರ್ಶನ ಮತ್ತು ಸಹಕಾರದೊಂದಿಗೆ ಸದಸ್ಯತ್ವ ನೋಂದಣಿ ಅಭಿಯಾನ ಹಮ್ಮಿಕೊಂಡು ಮಹಾಸಭೆಯನ್ನು ಇನ್ನಷ್ಟು ಬಲಪಡಿಸಲಾಗುವುದು. ಸಮಾಜದ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಸಂಘಟನೆಯ ಚಟುವಟಿಕೆಗಳಲ್ಲಿ ಪಾಲ್ಗೊಂಡು ಸಹಕಾರ ನೀಡಬೇಕು” ಎಂದು ಕರೆ ನೀಡಿದರು.

ಮಹಿಳಾ ಘಟಕದ ನೂತನ ಅಧ್ಯಕ್ಷೆ ಗೀತಾ ವಾಲಿ ಮಾತನಾಡಿ, ಮಹಿಳೆಯರ ಸಬಲೀಕರಣ ಹಾಗೂ ಸಮಾಜದ ಅಭಿವೃದ್ಧಿಯಲ್ಲಿ ಮಹಿಳೆಯರ ಸಕ್ರಿಯ ಪಾತ್ರವನ್ನು ಹೆಚ್ಚಿಸುವ ನಿಟ್ಟಿನಲ್ಲಿ ವಿಶೇಷ ಕಾರ್ಯಕ್ರಮಗಳನ್ನು ರೂಪಿಸಲಾಗುವುದು ಎಂದು ತಿಳಿಸಿದರು.

ಸಭೆಯಲ್ಲಿ ರಾಜ್ಯ ಮಹಿಳಾ ಘಟಕದ ಕಾರ್ಯದರ್ಶಿ ಕವಿತಾ ಜಾಲಿಹಾಳ, ತಾಲೂಕು ಘಟಕದ ಅಧ್ಯಕ್ಷ ಪ್ರಭು ಚವಡಿ ಹಾಗೂ ಪ್ರಧಾನ ಕಾರ್ಯದರ್ಶಿ ಬಸವರಾಜ ಶೀಲವಂತರ ಮಾತನಾಡಿ, ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿ, ಸಮಾಜದ ಅಭಿವೃದ್ಧಿಗೆ ಒಗ್ಗಟ್ಟಿನ ಕಾರ್ಯ ಅವಶ್ಯಕ ಎಂದು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಸಲಹಾ ಸಮಿತಿ ಸದಸ್ಯರಾದ ಡಾ. ಬಿ.ವಿ. ಕಂಬಳ್ಯಾಳ, ಟಿ.ಎಸ್. ರಾಜೂರ, ಬಿ.ಎಂ. ಸಜ್ಜನರ, ಗುರುಸಿದ್ದಯ್ಯ ಸೂಗಿರಯ್ಯನಮಠ, ಮಂಜುಳಾ ರೇವಡಿ, ಯುವ ಘಟಕದ ನಿರ್ದೇಶಕ ಸಿದ್ದು ಗೊಂಗಡಶೆಟ್ಟಿಮಠ, ಬಸವರಾಜ ಪುರ್ತಗೇರಿ, ಶರಣಪ್ಪ ರೇವಡಿ, ಬಸವರಾಜ ಚನ್ನಿ, ಗುರುಲಿಂಗಯ್ಯ ಹಿರೇಮಠ, ಅವಿನಾಶ ಕೊಟಗಿ, ರಾಜೇಂದ್ರ ಹಿರೇಮಠ, ಮುತ್ತಣ್ಣ ಮ್ಯಾಗೇರಿ, ಅಮರೇಶ ಮಾರನಬಸರಿ, ಶಿವಕುಮಾರ ಅರಳಿ, ಜಗದೀಶ ಹಿರೇಮಠ, ಪ್ರಭುಲಿಂಗಯ್ಯ ಹಿರೇಮಠ, ರುದ್ರೇಶ ಕೆರಿ, ದರ್ಶನ ಡುಮ್ಮನವರ, ಭುವನೇಶ್ವರಿ ಅಂಗಡಿ, ಸುಕನ್ಯಾ ಹೊಗರಿ, ಅಕ್ಕಮ್ಮ ನೀರಲಗಿ, ಸುಮಾ ಲಕ್ಕುಂಡಿಮಠ, ರೇಖಾ ರಾಜೂರ, ನಿರ್ಮಲಾ ತಾಳಿಕೋಟಿ, ಜ್ಯೋತಿ ಸಕ್ರಿ, ಸುಮಂಗಲಾ ರೇವಡಿ, ಶಿವಲೀಲಾ ನಿಡಶೇಶಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಸಭೆಯ ಅಂತ್ಯದಲ್ಲಿ ನೂತನ ಅಧ್ಯಕ್ಷ ಶಿವಕುಮಾರ ಶಶಿಮಠ ಅವರನ್ನು ಮಹಾಸಭೆಯ ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು.


Post a Comment

Previous Post Next Post
Loading...

Breaking News

ಭ್ರಷ್ಟರ ಬೇಟೆ
ಜಿಲ್ಲಾ ಸುದ್ದಿ is loading...