⚡ಟ್ರೆಂಡಿಂಗ್ಸ್

ಸಾಹಿತಿ ಸುನಿತಾ ಹೊಸೂರು ಅವರ ಕವನ *ತಾಳ್ಮೆ*

ಸಾಹಿತಿ ಸುನಿತಾ ಹೊಸೂರು ಅವರ ಕವನ *ತಾಳ್ಮೆ*

ತಾಳಿದವನು ಬಾಳಿಯಾನು ಎನ್ನುವ ಮಾತು ಅಕ್ಷರ ಸಹ ಸತ್ಯವಾದ ಮಾತು. ಇಂದಿನ ಡಿಜಿಟಲ್ ಯುಗದಲ್ಲಿ ಮನುಷ್ಯ ತಾಳ್ಮೆಯನ್ನು ಕಳೆದುಕೊಂಡು ತನ್ನನ್ನ ತಾನು ಹತಾಶೆಯನಂತೆ ಬಿಂಬಿಸಿಕೊಳ್ಳುತ್ತ ಇತರರ ಏಳ್ಗೆಯನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಕಳೆದುಕೊಂಡು ಹಪಹಪಿಸುತ್ತಿರುವನು. 

ಜಗತ್ತು ವಿಶಾಲವಾದ ಪ್ರಕೃತಿಯನ್ನು ಹೊಂದಿದೆ ಈ ಪ್ರಕೃತಿಗೆ ನಾವುಗಳು ಬಂದಿದ್ದೆ ಒಂದು ಪುಣ್ಯ. ಇರುವಷ್ಟು ದಿನ ಪ್ರಕೃತಿಗೆ ಹೊಂದಿಕೊಂಡು ಬದುಕುವುದು ನಿಜವಾದ ತಾಳ್ಮೆಯ ಬದುಕು. ಆದರೆ ಮನುಷ್ಯ ಎಲ್ಲವನ್ನು ತನ್ನನಂತೆಯೇ ನಡೆಯಬೇಕು ನಾನು ಅಂದುಕೊಂಡಿದ್ದು ತಕ್ಷಣಕ್ಕೆ ಆಗಬೇಕು ಎಂಬ ದೋರಣೆಯ ಮನೋಭಾವವನ್ನ ಆಳವಾಗಿ ಬೇರುರಿಸಿಕೊಂಡು ತನ್ನ ತಾಳ್ಮೆಯನ್ನ ಕಳೆದುಕೊಳ್ಳುತ್ತಿದ್ದಾನೆ. ಇಂದಿನದನ್ನು ಮರೆತು ನಾಳೆಯ ದಿನದ ಯೋಚನೆಯನ್ನು ಮಾಡುತ್ತ ಇಂದಿನ ಸುಂದರವಾದ ಸಮಯವನ್ನು ತಾನಾಗಿಯೇ ಹಾಳು ಮಾಡಿಕೊಳ್ಳುತ್ತ ಅದ್ಭುತವಾದ ಭವಿಷ್ಯಕ್ಕೆ ಚಿಂತೆಯ ಸೇರೇಮನೆಯನ್ನು ತಾನಾಗಿಯೇ ನಿರ್ಮಿಸಿಕೊಳ್ಳುವುದು ವಿಪರ್ಯಾಸವಾಗಿದೆ.

ತಾಳ್ಮೆಯಿಂದ ಜಗತ್ತನ್ನ ಗೆದ್ದಿರುವ ಅದೆಷ್ಟೋ ಮಹನೀಯರು ಇಂದು ಇಲ್ಲದಿದ್ದರೂ ಅವರು ಜೀವಿಸಿರುವಂತ ದಿನಗಳ ಹಾದಿಯು ಇಂದಿಗೂ ಜೀವಂತವಾಗಿ ಇತರರಿಗೆ ಆದರ್ಶವಾಗಿ ಉಳಿದಿವೆ. ಇವರಿಗೆ ಜೀವನದಲ್ಲಿ ಕಷ್ಟಗಳು ಬಂದಿರಲಿಲ್ಲವೇ, ಅವಮಾನಗಳು ಆಗಿರಲಿಲ್ಲವೇ, ಎಲ್ಲವು ಆಗಿದ್ದವು ಆದರೆ ಇವರು ತಮ್ಮನ್ನ ತಾವು ಗೆಲ್ಲಲು ತಾಳ್ಮೆಯನ್ನ ತಮ್ಮ ಅಸ್ತ್ರವಾಗಿಟ್ಟುಕೊಂಡಿದ್ದರಿಂದ ಜಗತ್ತನ್ನ ಗೆದ್ದು ಇತಿಹಾಸದ ಪುಟಗಳಲ್ಲಿ ಅಜರಾಮರಾಗಿದ್ದಾರೆ.

ಆದರೆ ಇಂದಿನ ಯುಗದಲ್ಲಿ ಮನುಷ್ಯ ತನ್ನ ಬಗ್ಗೆ ಯೋಚನೆಯನ್ನು ಮಾಡುವಕಿಂತ ಇತರರ ಬಗ್ಗೆ ಚಿಂತೆ 
ಮಾಡುವುದೇ ಹೆಚ್ಚಾಗಿದೆ ಇದರಲ್ಲಿಯೇ ತಮ್ಮ ಜೀವಿತದ ಅರ್ಧ ಆಯಾಸನ್ನು ಕಳೆದುಕೊಂಡು ಮುಪ್ಪಾಗುತ್ತಿದ್ದಾನೆ. ಯಾವುದನ್ನೂ ಸಹಿಸಿಕೊಳ್ಳದ ಕೀಳರಿಮೆಯನ್ನ ಮನದಾಳಕ್ಕಿರಿಸಿ ದ್ವೇಷ, ಅಸೂಹೆ, ದುರವರ್ತನೆ, ಕಪಟತನ, ದುಸ್ಪ್ರೇರಣೆ, ದುರಾಲೋಚನೆ, ಅಪಹಾಸ್ಯ ಎಲ್ಲವನ್ನು ಮೈಗುಡಿಸಿಕೊಂಡು ಸುಂದರವಾದ ಇಂದಿನ ದಿನವನ್ನ ಕೊನೆಗಾಣಿಸುತ್ತಿರುವುದು ಸೋಜಿಗವಾಗಿದೆ.

*ಉದಾಹರಣೆಗೆ* ಒಮ್ಮೆ ಜೋರಾದ ಗಾಳಿ ಬಿಸಿ ಕಸ, ಕಡ್ಡಿ, ಕಲ್ಲು, ಮಣ್ಣು ದೂಳು ಎಲ್ಲವೂ ಮೈ ಮೇಲೆ ದುಮುಕಿದಾಗ ಕಣ್ಣರೆಪ್ಪೆಯ ಮೇಲು ಕೂತುಕೊಳ್ಳುತ್ತವೆ ಆಗ ತಾಳ್ಮೆವಹಿಸಿ ಸೂಕ್ಷ್ಮವಾಗಿ ಒರೆಸಿಕೊಂಡರೆ ಕಣ್ಣಿಗಾಗುವ ಅಪಾಯವನ್ನ ತಪ್ಪುಸಬಹುದು ಆದರೆ ಅವಸರದಲ್ಲಿ ಉಜ್ಜಿಕೊಂಡರೆ ಕಣ್ಣಿನ ಸ್ವಾದವೇ ತಪ್ಪಿ ಹೋಗಬಹುದು ಅಲ್ಲವೆ. ಆದ್ದರಿಂದ ಸುಂದರವಾದ ಇಂದಿನ ದಿನವನ್ನ ಕಳೆಯಬೇಕಾದರೆ ತಾಳ್ಮೆ ಎಂಬ ಅಸ್ತ್ರವನ್ನು ಮೈಗುಡಿಸಿಕೊಂಡರೆ ನಮ್ಮನ ನಾವು ಗೆಲ್ಲಿವುದರಲ್ಲಿ ಯಾವುದೇ ಸಂದೇಹವಿಲ್ಲ.

*ಸುನಿತಾ ಹೊಸೂರು*

Post a Comment

Previous Post Next Post
Loading...

Breaking News

ಭ್ರಷ್ಟರ ಬೇಟೆ
ಜಿಲ್ಲಾ ಸುದ್ದಿ is loading...