⚡ಟ್ರೆಂಡಿಂಗ್ಸ್

ಕೇಂದ್ರ ಬಿಜೆಪಿ ಸರ್ಕಾರದ ವೈಫಲ್ಯವನ್ನು ಮರೆಮಾಚಲು ಮೋದಿ ಹೊಸ ನಾಟಕ: ಗದಗ ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಅಶೋಕ ಮಂದಾಲಿ ಆರೋಪ

ಕೇಂದ್ರ ಬಿಜೆಪಿ ಸರ್ಕಾರದ ವೈಫಲ್ಯವನ್ನು ಮರೆಮಾಚಲು ಮೋದಿ ಹೊಸ ನಾಟಕ: ಗದಗ ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಅಶೋಕ ಮಂದಾಲಿ ಆರೋಪ


ಗದಗ: ಕಳೆದ 12 ವರ್ಷಗಳಿಂದ ಸಾಲು ಸಾಲು ಬೆಲೆಯೇರಿಕೆ ಮಾಡಿ ಭಾರತಿಯ ಕುಟುಂಬಗಳ ಸಾಲವು GDPಯ 38% ರಷ್ಟಿದ್ದು ಜನರನ್ನು ಸಾಲಗಾರನ್ನಾಗಿ ಮಾಡಿದ ಮೋದಿ ಸರ್ಕಾರ ಈಗ ಮಿತ ಬಳಕೆಯ ಪಾಠ ಮಾಡುತ್ತಿದೆ ಎಂದು ಗದಗ ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷರು ಹಾಗೂ ಗದಗ ತಾಲೂಕು ಪಂಚ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ಅಶೋಕ ಮಂದಾಲಿ ಆರೋಪಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಭಾರತ ವಿಶ್ವದ 4ನೇ ಅತಿದೊಡ್ಡ ದೇಶವಾಗಿದೆ ಎಂದು ಮೋದಿ ಹೇಳಿ ಒಂದು ವರ್ಷವಾಗುವುದರೊಳಗೆ ಭಾರತ 6ನೇ ಸ್ಥಾನಕ್ಕೆ ಕುಸಿದಿದ್ದು ಪೆಟ್ರೋಲ್ ಮತ್ತು ಡೀಸಲ್ ಕಡಿಮೆ ಬಳಸಿ, ಗೊಬ್ಬರ ಬಳಕೆ 50% ಇಳಿಸಿ ಸಾವಯವ ಕೃಷಿ ಮಾಡಿ, ಒಂದು ವರ್ಷ ಅನಗತ್ಯ ಚಿನ್ನ ಖರೀದಿ ಮಾಡಬೇಡಿ, ಸ್ವಂತ ವಾಹನ ಬಿಟ್ಟು ಬಸ್, ಮೆಟ್ರೋ, ರೈಲು ಬಳಸಿ ಎಂದು ಹೇಳುತ್ತಿರುವ ಮೋದಿ, ಕೇಂದ್ರ ಸರ್ಕಾರದ ವೈಫಲ್ಯವನ್ನು ಮುಚ್ಚಿ ಹಾಕುವ ಪ್ರಯತ್ನ ಮಾಡುತ್ತಿದ್ದಾರೆ.

2026ರಲ್ಲಿ ಭಾರತ ಒಟ್ಟು $775 ಬಿಲಿಯನ್ ಆಮದಿನ ಪೈಕಿ ಕಚ್ಚಾ ತೈಲ - $134.7 ಬಿಲಿಯನ್, ಚಿನ್ನ - $72 $14.5 ಬಿಲಿಯನ್ ಆಮದು ಮಾಡಿಕೊಂಡಿದ್ದು ವ್ಯಾಪಾರ ಕೊರತೆ 20 ಬಿಲಿಯನ್, ರಸಗೊಬ್ಬರಗಳು ಬಿಲಿಯನ್ ಡಾಲರ್ ತಲುಪಿದೆ. ಟ್ರಂಪ್ ಬೆದರಿಕೆಗೆ ಹೆದರಿ ರಷ್ಯಾದಿಂದ ಕಚ್ಚ ತೈಲ ಅಮದು ನಿಲ್ಲಿಸಿ ಈಗ ಇರಾನ್- ಇಸ್ರೇಲ್ ಯುದ್ಧ ಬಿಕ್ಕಟ್ಟಿನಿಂದಾಗಿ ದೇಶದಲ್ಲಿ ಕಚ್ಚಾ ತೈಲ ಕುಸಿದ ಆಮದಿನಿಂದಾಗಿ ಪೆಟ್ರೋಲ್ ಮತ್ತು ಡೀಸಲ್ ಕಡಿಮೆ ಬಳಸಿ ಎಂದು ಹೇಳುತ್ತಿರುವ ಕೇಂದ್ರ ಬಿಜೆಪಿ ಸರ್ಕಾರ ಅಸಮರ್ಥವಾಗಿದೆ.

2 ಕೋಟಿ ಉದ್ಯೋಗ ಸೃಷ್ಟಿ, ರೈತರ ಆದಾಯ ದ್ವಿಗುಣ ಎಂದು ಸಾಲು ಸಾಲು ಸುಳ್ಳಿನ ಅರಮೆ ಕಟ್ಟಿ ಈಗ 2047ಕ್ಕೆ ವಿಕಸಿತ ಭಾರತದ ಸುಳ್ಳಿನ ಕನಸನ್ನು ಬಿತ್ತುತ್ತಿರುವ ಕೇಂದ್ರ ಮೋದಿ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಬಳಕೆಯನ್ನು ಕಡಿತಗೊಳಿಸಬೇಕು ಎಂದು ಹೇಳಿ ಸಾಲು ಸಾಲು LPG ಬೆಲೆಯೇರಿಕೆಯನ್ನೇ ಮುಚ್ಚಿಹಾಕಿದ ಹೊರಟಿರುವ ಮೋದಿಯ ಬೆಲೆಯೇರಿಕೆ ಮುಖವಾಡ ಬಟಾಬಯಲಾಗಿದೆ.

ಪ್ರತಿ ಚುನಾವಣೆ ನಂತರ ಬೆಲೆ ಏರಿಕೆ ಮಾಡುತ್ತಿದ್ದ ಕೇಂದ್ರ ಬಿಜೆಪಿ ಸರ್ಕಾರ ಈಗ 5 ರಾಜ್ಯಗಳ ಚುನಾವಣೆ ಮುಗಿದ ನಂತರ 2026 ಮೇ 1 ರಂದು ವಾಣಿಜ್ಯ ಬಳಕೆ LPG ಬೆಲೆಯನ್ನು 993 ರೂ. ಮತ್ತು 5kg LPG ಬೆಲೆಯನ್ನು 261 ರೂ.ಗೆ ಹೆಚ್ಚಳ ಮಾಡಿದೆ. 2026ರ ಜನವರಿಯಲ್ಲಿ 1691 ರೂ. ವಾಣಿಜ್ಯ LPG ಬೆಲೆಯನ್ನು ಮೇ ತಿಂಗಳವರೆಗೆ ಅಂದರೆ ಕೇವಲ 5 ತಿಂಗಳ ಅವಧಿಯಲ್ಲಿ 3071 ರೂ. ತಲುಪಿದ್ದು 81.58% ಹೆಚ್ಚಳವಾಗಿದೆ ಮತ್ತು ಈ ಹಿಂದೆ 2078 ರೂ. ಇದ್ದ ವಾಣಿಜ್ಯ ಬಳಕೆ LPG ಬೆಲೆಯನ್ನು 993 ರೂ. ಹೆಚ್ಚಿಸಿ 3071 ರೂ. ತಲುಪಿದ್ದು 47% ಹೆಚ್ಚಳವಾಗಿದೆ.

ಆಟೋ LPG ಗ್ಯಾಸ್ ಬೆಲೆಯನ್ನು 5.73 ರೂ. ಹೆಚ್ಚಿಸಿ 95.08 ರೂ.ಗೆ ಏರಿಕೆ ಮಾಡಲಾಗಿದ್ದು ದೇಶದಲ್ಲಿ ಆಟೋವನ್ನೇ ನಂಬಿಕೊಂಡು ಜೀವನ ಸಾಗಿಸುತ್ತಿರುವ 1 ಕೋಟಿಗೂ ಹೆಚ್ಚು ಆಟೋ ಚಾಲಕರಿಗೆ ಬದುಕನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಸಾಲು ಸಾಲು ಬೆಲೆ ಏರಿಕೆಯಿಂದಾಗಿ LPG ಬೆಲೆಯನ್ನು ಗಗನ ಮುಟ್ಟಿಸಿ ಜನರು ಊಟಕ್ಕೂ ಪರದಾಡುವಂತೆ ಮಾಡಿ ಈಗ ಪೆಟ್ರೋಲ್ ಮತ್ತು ಡೀಸೆಲ್ ಬಳಕೆಯನ್ನು ಕಡಿತಗೊಳಿಸಬೇಕು ಎಂದು ಹೇಳುತ್ತಿರುವ ಮೋದಿ ಪೆಟ್ರೋಲ್ ಬೆಲೆಯನ್ನು 100 ಗಟಿದಾಟಿಸಿದ್ದು ಮುಂದಿನ ದಿನಗಳಲ್ಲಿ ಪೆಟ್ರೋಲ್ ಮತ್ತು ಡೀಸಲ್ ಬೆಲೆಯನ್ನು 200ರ ಗಡಿದಾಟಿಸುವ ಮುನ್ಸೂಚನೆಯೇ ? ಎಂಬ ಅನುಮಾನ ವ್ಯಕ್ತವಾಗುತ್ತಿದೆ.

ಸ್ವಂತ ವಾಹನ ಬಿಟ್ಟು ಬಸ್, ಮೆಟ್ರೋ, ರೈಲು ಬಳಸಿ ಎಂದು ಮೋದಿ ಕರೆ ಕೊಟ್ಟಿದ್ದಾರೆ ಆದರೆ ವಾಸ್ತವದಲ್ಲಿ ರೈಲ್ವೆ ಸೌಲಭ್ಯ ಕೊರತೆಯಿಂದಾಗಿ 2025-26ರಲ್ಲಿ 3 ಕೋಟಿ ಜನರು ರೈಲು ಪ್ರಯಾಣಕ್ಕೆ ಕತ್ತರಿ ಬಿದ್ದಿದ್ದು ಕೇವಲ ಮುಂಬೈನ ರೈಲುಗಳಲ್ಲಿ ಅಗತ್ಯಗಿಂತ ಹೆಚ್ಚು ಜನರು ಪ್ರಯಾಣಿಸುವುದರಿಂದ ವಾರ್ಷಿಕ 2,500 ಜನರು ಜೀವ ಕಳೆದುಕೊಳ್ಳುತ್ತಿದ್ದು ಪ್ರತಿ ದಿನ 60 ಜನರು ಸಾವನಪ್ಪುತ್ತಿದ್ದಾರೆ. 2014ರಲ್ಲಿ ಪ್ರತಿ ಬ್ಯಾರಲ್ ಕಚ್ಚಾ ತೈಲ ಬೆಲೆ 120 ಡಾಲರ್ ಇದ್ದಾಗ ಪೆಟ್ರೋಲ್ 71 ರೂ. ಮತ್ತು ಡಿಸೇಲ್ 55 ರೂ.ಗೆ ಸಿಗುತ್ತಿತ್ತು ಆದರೆ ಈಗ ಪ್ರತಿ ಬ್ಯಾರಲ್ ಕಚ್ಚಾ ತೈಲ ಬೆಲೆ 100 ಡಾಲರ್‌ಗೆ ಲಭ್ಯವಿದ್ದರು ಪೇಟ್ರೋಲ್ 102 ರೂ ಮತ್ತು ಡೀಸೆಲ್ 90 ರೂಗೆ ಹೆಚ್ಚಳ ಮಾಡಿ ಜನರನ್ನು ದೋಚುತ್ತಿರುವ ಮಾಡುತ್ತಿರುವ ಕೇಂದ್ರ ಸರ್ಕಾರ 2014ರಿಂದ ಇಲ್ಲಿಯವರೆಗೆ ಪೆಟ್ರೋಲ್ ಮತ್ತು ಡಿಸೇಲ್ ತೆರಿಗೆಯಿಂದ 43 ಲಕ್ಷ ಕೋಟಿ ರೂ. ಸಂಗ್ರಹಿಸಿದೆ.

ಪೆಟ್ರೋಲ್ ಮತ್ತು ಡೀಸೆಲ್ ಬಳಕೆಯನ್ನು ಕಡಿತಗೊಳಿಸಬೇಕು ಎಂದು ಹೇಳುವ ಮೋದಿ ಯಾಕೆ 2018ರಲ್ಲಿ ಎಥೆನಾಲ್ ಮಿಶ್ರಿತ ಇಂಧನವು (E20) ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಕಡಿಮೆ ಮಾಡುವುದು ಎಂದು ಹೇಳಿತ್ತು ಆದರೆ ವಾಸ್ತವದಲ್ಲಿ ಈಗಾಗಲೇ ಪೆಟ್ರೋಲ್ 100ರ ಗಟಿದಾಟಿದೆ.

2020ರ ಕೊರೋನದಂತ ಮಹಾಮಾರಿಯ ಕಾಲದಲ್ಲಿಯೂ ದೇಶದ ಜನರ ಮೇಲೆ ಕನಿಷ್ಟ ಕನಿಕರವಿಲ್ಲದೇ ಎಲ್‌ಪಿಜಿ ಬೆಲೆಯನ್ನು 581 ರೂಯಿಂದ 694 ರೂ.ಗೆ ಹೆಚ್ಚಳ, ಪೆಟ್ರೋಲ್ ಬೆಲೆ 72ರಿಂದ 86ಕ್ಕೆ, ಡಿಸೇಲ್ ಬೆಲೆ 66ರಿಂದ 78ಕ್ಕೆ ಹೆಚ್ಚಳ ಮಾಡಿದೆ. ರೈತರ ಆದಾಯವನ್ನು ದ್ವಿಗುಣ ಮಾಡುವುದಾಗಿ ಹೇಳಿ ದೇಶದಲ್ಲಿ 50% ಕ್ಕಿಂತ ಹೆಚ್ಚು ಕೃಷಿ ಕುಟುಂಬಗಳು ಸಾಲದಲ್ಲಿ ಸಿಲುಕಿದ್ದು ಕೇಂದ್ರ ಬಿಜೆಪಿ ಸರ್ಕಾರದ ವೈಫಲ್ಯದಿಂದ ಗೊಬ್ಬರ ಕೊರತೆಯಿಂದ ಕಂಗೆಟ್ಟಿರುವ ರೈತರಿಗೆ 50% ಗೊಬ್ಬರ ಕಡಿಮೆ ಬಳಸಿ ಸಾವಯವ ಕೃಷಿ ಮಾಡಿ ಎಂದು ಹೇಳಿ ಏನು ಪ್ರಯೋಜನ ಎಂದು ಪ್ರಶ್ನಿಸಿದ್ದಾರೆ.

ಫೆಬ್ರವರಿ 2026ರಲ್ಲಿ ನಡೆದ ಅಮೆರಿಕ-ಭಾರತದ ಒಪ್ಪಂದ ಪ್ರಕಾರ ಭಾರತ ಮುಂದಿನ 5 ವರ್ಷಗಳಲ್ಲಿ ಅಮೆರಿಕದಿಂದ 500 ಬಿಲಿಯನ್ ಡಾಲರ್ ಆಮದು ಮಾಡಿಕೊಳ್ಳಲು ಒಪ್ಪಿಕೊಂಡಿದೆ. ಆದರೆ, ಪ್ರಸ್ತುತ ಅಮೆರಿಕದಿಂದ ವಾರ್ಷಿಕ 45 ಬಲಿಯನ್ ಡಾಲರ್ ಆಮದಿಗೆ ಹೋಲಿಸಿದೆ. ವಾರ್ಷಿಕ ಆಮದು 100%ಗಿಂತ ಹೆಚ್ಚಾಗಲಿದ್ದು ಭಾರತದ ವ್ಯಾಪಾರ ಕೊರತೆ 20 ಬಿಲಿಯನ್ ಡಾಲರ್ ತಲುಪಿದ್ದು ಸದ್ದಿಲ್ಲದೆ ರೂಪಾಯಿ ಮೌಲ್ಯವನ್ನು ಕುಗ್ಗಿಸುತ್ತಿದೆ.

UPA ಸರ್ಕಾರ 10 ವರ್ಷಗಳ ಅಭಿವೃದ್ಧಿಪರ ಆಡಳಿತದಲ್ಲಿ ರೂಪಾಯಿ ಮೌಲ್ಯವು ಕೇವಲ 13 ರೂ. ಕಸಿದಿತ್ತು ಆದರೆ ಕೇಂದ್ರ ಬಿಜೆಪಿ ಸರ್ಕಾರದ 12 ವರ್ಷಗಳ ದುರಾಡಳಿತದಿಂದ 36 ರೂ ಕುಸಿದ್ದು UPA ಸರ್ಕಾರದ ಅವಧಿಗೆ ಹೋಲಿಸಿದರೆ ಸರಿಸುಮಾರು 3 ಪಟ್ಟು ಕುಸಿದಿದೆ ಎಂದು ಅಶೋಕ ಮಂದಾಲಿ ತಿಳಿಸಿದ್ದಾರೆ.

ಬಾಕ್ಸ್

ಕೇಂದ್ರ ಬಿಜೆಪಿ ಸರ್ಕಾರದ ದುರಾಡಳಿತದ ಪರಮಾವಧಿ:

ಸತತ 10 ವರ್ಷಗಳ ಕಾಲ ಭಾರತೀಯ ರೂಪಾಯಿ ಮೌಲ್ಯವನ್ನು ಕಳೆದುಕೊಳ್ಳುತ್ತಿದೆ ಈ ವರ್ಷವೂ US ಡಾಲರ್‌ಗೆ 95 ರೂ. ಕನಿಷ್ಠಕ್ಕೆ ತಲುಪಿದರು ಗಪ್ ಚುಪ್ಸ್ ಎನ್ನದಂತೆ ಸುಮ್ಮನಿರುವ ಮೋದಿ ಸರ್ಕಾರ 7 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನು ಸಾಧಿಸುವುದು ಅಸಾಧ್ಯ.

ಬ್ಲೂಮ್ ವೆಂಚರ್ಸ್ ವರದಿ ಪ್ರಕಾರ ಭಾರತದ ಒಟ್ಟು 143 ಕೋಟಿ ಜನಸಂಖ್ಯೆಯಲ್ಲಿ 100 ಕೋಟಿ ಜನರಲ್ಲಿ ಖರೀದಿಸುವ ಸಾಮರ್ಥ್ಯ ಕುಸಿದಿದ್ದು ಮೋದಿ ಸರ್ಕಾರ ದುರಾಡಳಿತದ ಕೈಗನ್ನಡಿ.

2014ರಲ್ಲಿ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ್ದಾಗ 7.4% ಇದ್ದ ದೇಶದ GDP ಬೆಳವಣಿಗೆಯು 2025ಕ್ಕೆ 6.5%ಗೆ ಕುಸಿದಿದ್ದು ನಾಲ್ಕು ವರ್ಷದ ಕನಿಷ್ಠಮಟ್ಟಕ್ಕೆ ಕೇಂದ್ರ ಬಿಜೆಪಿಯ ಸಾಧನೆ ಏನೆಂದು ಎತ್ತಿತೋರಿಸುತ್ತದೆ.

ಕೇರ್ ಎಡ್ಜ್ ರೇಟಿಂಗ್ಸ್‌ನ ವರದಿ ಪ್ರಕಾರ ಭಾರತಿಯ ಕುಟುಂಬಗಳ ಸಾಲವು GDPಯ 38% ರಷ್ಟಿದ್ದು ಜನರನ್ನು ಸಾಲದ ಸುಳಿಗೆ ಸಿಲುಕಿಸಿ 2014ರಲ್ಲಿ 55 ಲಕ್ಷ ಕೋಟಿ ರೂ. ಇದ್ದ ದೇಶದ ಸಾಲವನ್ನು 216 ಲಕ್ಷ ಕೋಟಿ ರೂ.ಗೆ ಹೆಚ್ಚಿಸಿ ಪ್ರತಿಯೊಬ್ಬರ ಮೇಲೂ 1 ಲಕ್ಷ ರೂಪಾಯಿಗೂ ಹೆಚ್ಚು ಸಾಲ ಹೊರಿಸಿದ ಕೇಂದ್ರ ಬಿಜೆಪಿ ಸರ್ಕಾರ.

ಭಾರತದ ಜನಸಂಖ್ಯೆಯ ಶೇ.50 ರಷ್ಟು ಜನರು ತಮ್ಮ ಒಟ್ಟು ಆದಾಯದ ಅರ್ಧದಷ್ಟು (45-50%) ಆಹಾರವನ್ನು ಖರೀದಿಸಲು ಖರ್ಚು ಮಾಡುತ್ತಿದ್ದು ಇದರಿಂದ ಕುಟುಂಬಗಳ ಉಳಿತಾಯವು GDPಯ ಸರಿಸುಮಾರು 5.1% 5.3% ಕ್ಕೆ ಕುಸಿದಿದ್ದು 45 ವರ್ಷದ ಕನಿಷ್ಠ ಮಟ್ಟಕ್ಕೆ ತಲುಪುವಂತೆ ಮಾಡಿದ ಕೇಂದ್ರ ಬಿಜೆಪಿ ಸರ್ಕಾರದ ಬೆಲೆ ಏರಿಕೆ.

ರೈತರನ್ನು . 2016ರಲ್ಲಿ ಪ್ರಧಾನಿ ಮೋದಿ ರೈತ ಆದಯವನ್ನು 2022ರೊಳಗೆ ದ್ವಿಗುಣ ಮಾಡುವುದಾಗಿ ಹೇಳಿ ರಸಗೊಬ್ಬರ ಕೊರತೆ, ಕನಿಷ್ಠ ಬೆಂಬಲ ಬೆಲೆ(MSP) ವಿಳಂಬ, ಯೋಜನೆಗಳ ಅನುದಾನ ಕಡಿತದಂತಹ ಸಾಲು ಸಾಲು ಸಂಕಷ್ಟದಲ್ಲಿ ಸಿಲುಕಿಸಿದ್ದಾರೆ.

2026ರ ಕೇಂದ್ರ ಬಜೆಟ್‌ನಲ್ಲಿ ರಸಗೊಬ್ಬರಗಳ ಸಬ್ಸಿಡಿಗೆ 1,70,799 ಕೋಟಿ ರೂ. ಮೀಸಲಿಟ್ಟಿದ್ದು ಕಳೆದ ವರ್ಷದ 1,86,460 ಕೋಟಿ ರೂ.ಗೆ ಹೋಲಿಸಿದರೆ 8.4% ಕುಡಿತ ಮಾಡಲಾಗಿದ್ದು ರೈತರಿಗೆ ರಸಗೊಬ್ಬರದ ಮೇಲಿನ ಸಬ್ಸಿಡಿಯನ್ನು ಕಿತ್ತುಕೊಂಡು ಈಗಾಗಲೇ ಸಂಕ್ಷದಲ್ಲಿರುವ ರೈತರಿಗೆ ಗಾಯದ ಮೇಲೆ ಬರೆ ಹಾಕಿದ ಕೇಂದ್ರ ಬಿಜೆಪಿ ಸರ್ಕಾರ.

ಭಾರತದಲ್ಲಿ 50% ಕ್ಕಿಂತ ಹೆಚ್ಚು ಕೃಷಿ ಕುಟುಂಬಗಳು ಸಾಲದಲ್ಲಿ ಮುಲುಗಿದ್ದು ಸರಾಸರಿ ಪ್ರತಿ ಕುಂಟುಗಳ ಮೇಲೆ 74,121 ರೂ. ಸಾಲ ಬಾಕಿಯಿದೆ ಎಂದು 2019 ರಲ್ಲಿ The National Sample Survey Office (NSSO) ವರದಿ ಮಾಡಿದೆ ಆದರು ಕೇಂದ್ರ ಮೋದಿ ಸರ್ಕಾರ ರೈತರ ಬಗ್ಗೆ ಕಿಂಚಿತ್ತು ಕಾಳಜಿ ಇಲ್ಲದಂತೆ ಕೈಚೆಲ್ಲಿ ಕುಳಿತಿದೆ.

ಸುಪ್ರೀಂ ಕೋರ್ಟ್‌ ಗೆ ಸಲ್ಲಿಸಿದ ವರದಿಯು ರೈತರ ಆದಾಯವನ್ನು ದ್ವಿಗುಣ ಮಾಡುತ್ತೇವೆ ಎಂದು ಬೊಬ್ಬೆ ಹೊಡೆದ ಮೋದಿ ಸರ್ಕಾರದ ಬಣ್ಣ ಬಯಲು ಮಾಡಿದೆ. ದೇಶದ ರೈತರು ದಿನಕ್ಕೆ ಕೇವಲ 27 ರೂ ದುಡಿಯುತ್ತಿದ್ದಾರೆ ಎಂದು ಉನ್ನತ ಮಟ್ಟದ ಸಮಿತಿಯ ಅಧ್ಯಕ್ಷರಾದ ಪಂಜಾಬ್ ಮತ್ತು ಹರಿಯಾಣ
ಹೈಕೋರ್ಟ್‌ ನಿವೃತ್ತ ನ್ಯಾಯಾಧೀಶ ನವಾಬ್ ಸಿಂಗ್ ಅವರು ನವೆಂಬರ್ 21, 2024 ರಂದು ಸುಪ್ರೀಂ ಕೋರ್ಟ್‌ಗೆ ಸಲ್ಲಿಸದ ವರದಿ ತಿಳಿಸಿದೆ.

ಮೋದಿ ಸರ್ಕಾರದ "ಮೇಕ್ ಇನ್ ಇಂಡಿಯಾ” ಯೋಜನೆಯಲ್ಲಿ 2022ರ ವೇಳೆಗೆ ಉತ್ಪಾದನಾ ವಲಯದಲ್ಲಿ 100 ಮಿಲಿಯನ್ ಉದ್ಯೋಗಗಳನ್ನು ಸೃಷ್ಟಿಸುವ ಗುರಿಯನ್ನು ಹೊಂದಿತ್ತು ಆದರೆ 2017 ಮತ್ತು 2021ರ ನಡುವೆ 24 ಮಿಲಿಯನ್ ಉದ್ಯೋಗಗಳನ್ನು ಕಳೆದುಕೊಂಡಿದೆ.

ಕೇಂದ್ರ ಮೋದಿ ಸರ್ಕಾರ ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಟಿಸುತ್ತೇವೆ ಎಂದು ಸುಳ್ಳು ಹೇಳಿ ಕಳೆದ ಬಜೆಟ್‌ನಲ್ಲಿ 4.1 ಕೋಟಿ ಯುವಜನತೆಗೆ ಮುಂದಿನ 5 ವರ್ಷಗಳ ಅವಧಿಯಲ್ಲಿ ಉದ್ಯೋಗ ಮತ್ತು ಕೌಶಲ್ಯ ಅಭಿವೃದ್ಧಿ ಮಾಡುತ್ತೇವೆ ಎಂದು ಮತ್ತೆ ಯುವಜನತೆಗೆ ಟೋಪಿ ಹಾಕುತ್ತಿದೆ.

ಮೋದಿನ ತನ್ನ ಅದಾನಿ, ಅಂಬಾನಿಯ ಮೀತ್ರರಿಗೆ ಸಹಾಯ ಮಾಡಲು 2019ರಲ್ಲಿ 30% ಇದ್ದ ಕಾರ್ಪೊರೇಟ್ ತೆರಿಗೆಯನ್ನು 22%ಗೆ ಇಳಿಸಿ ದೇಶದ ಅಭಿವೃದ್ಧಿಯನ್ನು ನೆಲಕಚ್ಚುವಂತೆ ಮಾಡಿದೆ ಎಂದು ಗದಗ ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷರು ಹಾಗೂ ಗದಗ ತಾಲೂಕು ಪಂಚ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ಅಶೋಕ ಮಂದಾಲಿ ತಿಳಿಸಿದ್ದಾರೆ.

Post a Comment

Previous Post Next Post
Loading...

Breaking News

ಭ್ರಷ್ಟರ ಬೇಟೆ
ಜಿಲ್ಲಾ ಸುದ್ದಿ is loading...