ಗದಗವಾಣಿ ಸುದ್ದಿಮೂಲ ಗದಗ:
ಗದಗ ನಗರದ ಡಿ.ಸಿ. ಮಿಲ್ ತಳಗೇರಿ ಓಣಿ ಯುವಕ ಮಂಡಳಿ ವತಿಯಿಂದ ಗದಗ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರು ಹಾಗೂ ಯುವ ನಾಯಕ ಶ್ರೀ ಕೃಷ್ಣ ಗೌಡ ಎಚ್. ಪಾಟೀಲ್ ಅವರ ಹುಟ್ಟುಹಬ್ಬದ ಪ್ರಯುಕ್ತ ಸಾರ್ವಜನಿಕರಿಗೆ ಹಣ್ಣು ಹಂಪಲು ವಿತರಣೆ ಹಾಗೂ ಪುಸ್ತಕ ವಿತರಣೆ ಕಾರ್ಯಕ್ರಮವನ್ನು ಭಾನುವಾರ ಆಯೋಜಿಸಲಾಯಿತು.
ಕಾರ್ಯಕ್ರಮದಲ್ಲಿ ಓಣಿಯ ಹಿರಿಯರಾದ ಅಶೋಕ ಹಾದಿಮನಿ ಮಾತನಾಡಿ, “ಯುವಕರಿಗೆ ಸ್ಪೂರ್ತಿದಾಯಕ ನಾಯಕತ್ವ ನೀಡುತ್ತಿರುವ ಕೆ. ಎಚ್. ಪಾಟೀಲ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು” ಎಂದು ಹೇಳಿದರು.
ಈ ವೇಳೆ ಯುವ ಮುಖಂಡ ಶಿವಾನಂದ ಸಕ್ರಿ ಮಾತನಾಡಿ, “ಸಾಮಾನ್ಯ ಜನರ ಸಮಸ್ಯೆಗಳಿಗೆ ಸ್ಪಂದಿಸಿ, ಯುವಕರ ಬೇಡಿಕೆಗಳನ್ನು ಈಡೇರಿಸುವಲ್ಲಿ ಸದಾ ಮುಂದಿರುವ ನಾಯಕರು ಕೆ. ಎಚ್. ಪಾಟೀಲ್” ಎಂದು ಅಭಿಪ್ರಾಯಪಟ್ಟರು.
ಇನ್ನೊಬ್ಬ ಯುವ ಮುಖಂಡ ವಿಷ್ಣು ಹಾದಿಮನಿ ಮಾತನಾಡಿ, “ಕೆ. ಎಚ್. ಪಾಟೀಲ್ ಅವರಂತಹ ನಾಯಕರು ದೊರಕಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿ” ಎಂದು ಶುಭಾಶಯ ಕೋರಿದರು.
ಕಾರ್ಯಕ್ರಮದಲ್ಲಿ ಕಾರ್ತಿಕ್ ನಾಗನಾಥನಹಳ್ಳಿ, ಮಂಜುನಾಥ್ ಕುಡತಿನಿ, ವಿರೂಪಾಕ್ಷ ಸಂಗಾಪುರ, ರಾಘವೇಂದ್ರ ನಾಗನಾಥನಹಳ್ಳಿ, ಮಾರುತಿ ಬೀರಕಟ್ಟಿ, ಕೃಷ್ಣ ಬಳ್ಳರೂ, ಪ್ರಮೋದ್ ಸಕ್ರಿ, ಅಭಿ ಸಂಗಾಪುರ, ಸಂಜಯ್ ಮಾದರ, ಮಂಜುನಾಥ್ ಪರಾಪುರ, ಚಿನ್ನು ಮಾದರ, ಅವಿನಾಶ್ ಹರಿಜನ, ರಾಹುಲ್ ಬಳ್ಳಾರಿ, ವಿನಾಯಕ ಬಳ್ಳರೂ, ಯಶವಂತ ಹುಬ್ಬಳ್ಳಿ, ಓಂಕಾರ, ಹೇಮಂತ್ ಗುತ್ತಮ್ಮನವರ, ಶ್ರವಣ ಕಟ್ಟಿಮನಿ ಸೇರಿದಂತೆ ಓಣಿಯ ಯುವಕರು, ಮಹಿಳೆಯರು ಹಾಗೂ ಶ್ರೀ ಕೃಷ್ಣ ಗೌಡ ಪಾಟೀಲ್ ಅವರ ಅಭಿಮಾನಿಗಳು ಉಪಸ್ಥಿತರಿದ್ದರು.
Post a Comment