ದೇಶಸೇವೆಯ ಸಂಕಲ್ಪ ತೊಟ್ಟ ಅಗ್ನಿವೀರನಿಗೆ ಭವ್ಯ ಸನ್ಮಾನ: ಯುವಕರಿಗೆ ಸ್ಫೂರ್ತಿಯಾದ ಪ್ರಜ್ವಲ್ ಯಳವತ್ತಿ
ಗದಗ: ದೇಶದ ರಕ್ಷಣೆಯೇ ಪರಮ ಧರ್ಮ ಎಂದು ಭಾವಿಸಿ, ಸೈನ್ಯಕ್ಕೆ ಸೇರ್ಪಡೆಗೊಳ್ಳುತ್ತಿರುವ ಗದಗ ನಗರದ ಯಲಿಗಾರ ಪ್ಲಾಟ್ ನಿವಾಸಿ ಪ್ರಜ್ವಲ್ ಬಸವರಾಜ್ ಯಳವತ್ತಿ ಅವರಿಗೆ ಸ್ಥಳೀಯರು ಅತ್ಯಂತ ಅಭಿಮಾನದಿಂದ ಬೀಳ್ಕೊಡುಗೆ ನೀಡಿದರು.
ಸಿಕಂದರಾಬಾದ್ ಕ್ಯಾಂಪ್‌ಗೆ ತೆರಳುತ್ತಿರುವ ಪ್ರಜ್ವಲ್ ಅವರ ಸಾಧನೆಯನ್ನು ಗೌರವಿಸಲು ಗಂಜಿ ಬಸವೇಶ್ವರ ದೇವಸ್ಥಾನ ಕಮಿಟಿ,ಹಾಗೂ ಭಗತ್ ಸಿಂಗ್ ಅಭಿಮಾನಿ ಬಳಗದ ವತಿಯಿಂದ, ವಿಶೇಷ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಆರಂಭದಲ್ಲಿ ನಗರದ ಸರ್ಕಲ್‌ನಲ್ಲಿರುವ ಬಸವೇಶ್ವರ ಮೂರ್ತಿಗೆ ಪ್ರಜ್ವಲ್ ಅವರು ಮಾಲಾರ್ಪಣೆ ಮಾಡಿ ಆಶೀರ್ವಾದ ಪಡೆದರು. ನಂತರ ಕೇಕ್ ಕತ್ತರಿಸುವ ಮೂಲಕ ಸಂಭ್ರಮಿಸಿ, ದೇಶಸೇವೆಯ ಪಯಣಕ್ಕೆ ಚಾಲನೆ ನೀಡಲಾಯಿತು.
ಸ್ಫೂರ್ತಿಯ ಸಂಕೇತ:
ಈ ಸಂದರ್ಭದಲ್ಲಿ ಮಾತನಾಡಿದ ಓಣಿಯ ಹಿರಿಯರು, "ದೇಶಸೇವೆಗಿಂತ ಮಿಗಿಲಾದ ಸೇವೆ ಮತ್ತೊಂದಿಲ್ಲ. ಪ್ರಜ್ವಲ್ ಅವರು ಅಗ್ನಿವೀರನಾಗಿ ಆಯ್ಕೆಯಾಗಿರುವುದು ನಮ್ಮ ಭಾಗದ ಯುವಕರಿಗೆ ದೊಡ್ಡ ಸ್ಫೂರ್ತಿ. ಇವರ ದೇಶಪ್ರೇಮ ಮತ್ತು ಗಟ್ಟಿತನ ಇತರರಿಗೂ ಮಾದರಿಯಾಗಲಿ," ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ಪ್ರಜ್ವಲ್ ಅವರಿಗೆ ಹೂಮಾಲೆ ಹಾಕಿ, ಶಾಲು ಹೊದಿಸಿ ಗೌರವಿಸಲಾಯಿತು. ಸಿಹಿ ಹಂಚಿ, ಜೈಕಾರಗಳೊಂದಿಗೆ ಈ ಯುವ ಯೋಧನನ್ನು ಸೈನ್ಯಕ್ಕೆ ಕಳುಹಿಸಿಕೊಡಲಾಯಿತು.
ಈ ವೇಳೆ ಹೇಮಂತ ಗಿಡ್ಡಹನಮಣ್ಣವರ, ಶಿದ್ದರಾಮಪ್ಪ ಹುಂಬಿ, ಪ್ರಭು ಕಲಬಂಡಿ, ಶಂಕರ ಕರಬಿಷ್ಠಿ, ಗವಿಶಿದ್ದಯ್ಯ ನಾಲ್ವತವಾಡಮಠ, ಯಲಪ್ಪ ಜಂತ್ಲಿ, ಸುನೀಲ ಮಳಿಮಠ, ಬಸವರಾಜ ಕಂಠಿ, ಗಣೇಶ ಲಕ್ಕುಂಡಿ, ಅಂದಾನಯ್ಯ ವಿಭೂತಿಮಠ, ರಾಮಣ್ಣ ಜಡಿ, ಶಶಾಂಕ್ ಪುರದ, ಶಿವು ಕುಂಬಾರ, ಮಹಾಂತೇಶ ಪಾಟೀಲ, ಕಿರಣ ಮಳೆಪ್ಪನವರ, ಮಂಜುನಾಥ ಪುರದ, ಸೋಮು ಮುಳಗುಂದ, ಸುನೀಲ ಕೊತಬಾಳ, ಹುಚ್ಚಪ್ಪ ಐಹೊಳೆ, ಸಿದ್ದಲಿಂಗೇಶ ಸಂಗನಾಳ ಸೇರಿದಂತೆ ಗಣ್ಯರು, ಓಣಿಯ ಯುವಕರು, ಮಹಿಳೆಯರು ಹಾಗೂ ಅಪಾರ ಸಂಖ್ಯೆಯ ಸಾರ್ವಜನಿಕರು ಉಪಸ್ಥಿತರಿದ್ದು ಶುಭ ಹಾರೈಸಿದರು...
إرسال تعليق