⚡ಟ್ರೆಂಡಿಂಗ್ಸ್

ಕಡಕೋಳ ಹಾಗೂ ಛಬ್ಬಿ ಗ್ರಾಪಂಗಳಿಗೆ ಕಾರ್ಯನಿರ್ವಾಹಕ ಅಧಿಕಾರಿ ಆರ್ ವಿ ದೊಡ್ಡಮನಿ ಭೇಟಿ,ಕಾಮಗಾರಿ ಪರಿಶೀಲನೆ, ಕಾರ್ಮಿಕರೊಂದಿಗೆ ಚರ್ಚೆ...

ಕಡಕೋಳ ಹಾಗೂ ಛಬ್ಬಿ ಗ್ರಾಪಂಗಳಿಗೆ ಕಾರ್ಯನಿರ್ವಾಹಕ ಅಧಿಕಾರಿ ಆರ್ ವಿ ದೊಡ್ಡಮನಿ ಭೇಟಿ

ಕಾಮಗಾರಿ ಪರಿಶೀಲನೆ, ಕಾರ್ಮಿಕರೊಂದಿಗೆ ಚರ್ಚೆ


ಶಿರಹಟ್ಟಿ .ಮೇ 20: ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ಆರ್ ವಿ ದೊಡ್ಡಮನಿ ಅವರು ಕಡಕೋಳ ಮತ್ತು ಛಬ್ಬಿ ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ರಗತಿಯಲ್ಲಿರುವ ಸಮುದಾಯ ಕಾಮಗಾರಿ ಸ್ಥಳದಲ್ಲಿ ಹಾಜರಿದ್ದ ಕೂಲಿಕಾರ್ಮಿಕರ ಜೊತೆಯಲ್ಲಿ ಮಾತನಾಡಿದ ಅವರು ಪ್ರತಿ ಕೂಲಿ ಕಾರ್ಮಿಕರಿಗೆ ಆಳತೆಯ ಪ್ರಕಾರ ಕೆಲಸ ಮಾಡಿದರೆ 370ಗಳು ರೂಪಾಯಿಗಳು ದೊರೆಯುತ್ತವೆ. ಹಿರಿಯ ನಾಗರಿಕರಿಗೆ ಗರ್ಭಿಣಿಯರಿಗೆ ಅಂಗವಿಕಲರಿಗೆ ಕೆಲಸದ ಪ್ರಮಾಣದಲ್ಲಿ ರಿಯಾಯಿತಿ ಇರುತ್ತದೆ. 

ಎಲ್ಲಾ ಕೂಲಿ ಕಾರ್ಮಿಕರು ಅಳತೆಗೆ ತಕ್ಕ ಕೆಲಸವನ್ನು ಮಾಡಿ ಎರಡು ಬಾರಿ ಹಾಜರಾತಿ ಹಾಕಬೇಕು ಎರಡು ಬಾರಿ ಹಾಜರಾತಿ ಹಾಕದಿದ್ದರೆ ಕೂಲಿ ಹಣ ಪಾವತಿ ಆಗುವುದಿಲ್ಲ ಎಲ್ಲರೂ ಸರಿಯಾಗಿ ಕೆಲಸವನ್ನು ನಿರ್ವಹಿಸಿ 370 ರೂ ಕೂಲಿಯನ್ನ ಪಡೆದುಕೊಳ್ಳಿ ಎಂದು ತಿಳಿಸಿದರು. ಕೂಲಿಕಾರರು ಆರೋಗ್ಯವನ್ನು ಸರಿಯಾಗಿ ಇಟ್ಟುಕೊಳ್ಳಬೇಕು, ಮುಂಜಾನೆ ಬೇಗ ಬಂದು ಅಳತೆಗೆ ತಕ್ಕ ಕೆಲಸ ನೀಡಿ ಬೇಗ ಮುಗಿಸಿಕೊಂಡು ಹಾಜರಾತಿ ನೀಡಿ ಮನೆಗೆ ಹೋಗಬೇಕು, ಎರಡು ಬಾರಿ ಹಾಜರಾತಿ ನೀಡಿದವರಿಗೆ 370 ರೂ ಕೂಲಿ ಜಮೆ ಆಗಲಿದೆ ಎಂದರು. ಕೆಲಸದಿಂದ ಬಂದ ಕೂಲಿ ಹಣವನ್ನು ಕೃಷಿ ಚಟುವಟಿಕೆಗಳಿಗೆ ಬಳಸಿಕೊಳ್ಳಿ, ಮಕ್ಕಳ ಶಿಕ್ಷಣದ ಅಗತ್ಯತೆಗಳಿಗೆ, ಬಳಸಿಕೊಳ್ಳಬೇಕು ಎಂದರು ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿಯ ಎಲ್ಲಾ ಸಿಬ್ಬಂದಿ ವರ್ಗದವರು ನೇರೆಗಾ ಕೂಲಿ ಕಾರ್ಮಿಕರು ಇದ್ದರು. 

ಈ ಈ ವೇಳೆ ಕಡಕೋಳ ಪಂಚಾಯತಿಯ ಅಭಿವೃದ್ಧಿ ಅಧಿಕಾರಿ ಶಿವಾನಂದ ಮಾಳವಾಡ, ಛಬ್ಬಿ ಪಂಚಾಯತ ಅಭಿವೃದ್ಧಿ ಅಧಿಕಾರಿ ಸುಜಾತಾ ಕಪ್ಪಲಿ, ಟಿ ಐ ಇ ಸಿ ವಿರೇಶ್ ಪಟ್ಟಣಶೆಟ್ಟಿ, ತಾಂತ್ರಿಕ ಸಹಾಯಕ ಆಂಜನೇಯ, ಲಿಂಗರಾಜ, ಬಿ ಎಫ್ ಟಿ, ಡಿ ಇ ಓ, ಕಾಯಕ ಬಂಧುಗಳು, ನರೇಗಾ ಕೂಲಿ ಕಾರ್ಮಿಕರು ಉಪಸ್ಥಿತರಿದ್ದರು.

Post a Comment

أحدث أقدم
Loading...

Breaking News

ಭ್ರಷ್ಟರ ಬೇಟೆ
ಜಿಲ್ಲಾ ಸುದ್ದಿ is loading...