ಪ್ರಜಾಪ್ರಭುತ್ವದ ಕಗ್ಗೋಲೆ ಮಾಡಿ ಅಧಿಕಾರಕ್ಕೆ ಬರಲು ಕೇಂದ್ರ ಬಿಜೆಪಿ ಸರ್ಕಾರದ SIR ಷಡ್ಯಂತ್ರ: ಗದಗ ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಅಶೋಕ ಮಂದಾಲಿ ಆರೋಪ
ಗದಗ: 2014ರಲ್ಲಿ ಕೇಂದ್ರ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗ ಕೇವಲ 7 ರಾಜ್ಯಗಳಲ್ಲಿ ಅಧಿಕಾರದಲ್ಲಿದ್ದ NDA ಮೈತ್ರಿಕೂಟ ಸಂವಿಧಾನದಿಂದ ಆಯ್ಕೆಯಾದ ವಿರೋಧ ಪಕ್ಷಗಳನ್ನು ಬೀಳಿಸಲು EVM ಹ್ಯಾಕ್, ವೋಟ್ ಚೋರಿ, SIR ಮೂಲಕ ಇಂದು 22 ರಾಜ್ಯಗಳಲ್ಲಿ NDA ಮೈತ್ರಿಕೂಟ ಅಧಿಕಾರದಲ್ಲಿದೆ ಎಂದು ಗದಗ ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷರು ಹಾಗೂ ಗದಗ ತಾಲೂಕು ಪಂಚ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ಅಶೋಕ ಮಂದಾಲಿ ಆರೋಪಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, SIRಅನ್ನು ಚುನಾವಣೆ ಗೆಲುವಿನ Tool Kit ಆಗಿ ಬಳಸುತ್ತಿರುವ ಕೇಂದ್ರ ಬಿಜೆಪಿ ಸರ್ಕಾರ ವಿರೋಧ ಪಕ್ಷಗಳ ಮತಗಳನ್ನು ತೆಗೆದು ಹಾಕುವ ಮೂಲಕ ಕಡಿಮೆ ಮತಗಳ ಅಂತರದಲ್ಲಿ ಗೆದ್ದು ಅಧಿಕಾರದ ಚುಕ್ಕಾಣಿ ಹಿಡಿಯುತ್ತದೆ.
2026ರಲ್ಲಿ ಪಶ್ಚಿಮ ಬಂಗಾಳ, ಕೇರಳ, ಅಸ್ಸಾಂ, ಪಾಂಡಿಚರಿ, ತಮಿಳುನಾಡ ಸೇರಿ ಒಟ್ಟು ಪಂಚ ರಾಜ್ಯ ಚುನಾವಣೆಯಲ್ಲಿ SIR ಮೂಲಕ 2 ಕೋಟಿಗೂ ಹೆಚ್ಚು ಮತದಾರರನ್ನು ತೆಗೆದು ಹಾಕಲಾಗಿದೆ.
SIR ಮೂಲಕ ಅತಿ ಹೆಚ್ಚು ಬಿಜೆಪಿಯೇತರ ಮತಗಳನ್ನು ತೆಗೆದು ಹಾಕುವ ಮೂಲಕ 3 ಮುಖ್ಯಮಂತ್ರಿಗಳನ್ನೇ ಸೋಲಿಸಿದ ಬಿಜೆಪಿ, 2025ರ ದೆಹಲಿ ಚುನಾವಣೆಯಲ್ಲಿ ಅರವಿಂದ್ ಕೇಜ್ರಿವಾಲ್ ಸ್ಪರ್ಧಿಸಿದ ನ್ಯೂ ದೆಹಲಿ ವಿಧಾನಸಭಾ ಕ್ಷೇತ್ರದಲ್ಲಿ 38 ಸಾವಿರ ಮತಗಳನ್ನು ತೆಗೆದು ಹಾಕಿದ್ದು ಕೇವಲ 4 ಸಾವಿರ ಮತದಿಂದ ಮುಖ್ಯಮಂತ್ರಿಯಾಗಿದ್ದ ಕೇಜ್ರವಾಲ್ ತಮ್ಮ ಸ್ವಂತ ಕ್ಷೇತ್ರದಲ್ಲಿ ಸೋತರು.
ಇದೇ ರೀತಿ 2026ರ ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ಸ್ಪರ್ಧಿಸಿದ ಭವಾನಿಪುರ ವಿಧಾನಸಭಾ ಕ್ಷೇತ್ರದಲ್ಲಿ 51 ಸಾವಿರ ಮತಗಳನ್ನು ತೆಗೆದು ಹಾಕಿದ್ದು ಕೇವಲ 15 ಸಾವಿರ ಮತದಿಂದ ಮತ್ತು 2026ರ ತಮಿಳುನಾಡು ಚುನಾವಣೆಯಲ್ಲಿ ಸ್ಟಾಲಿನ್ ಸ್ಪರ್ಧಿಸಿದ ಕೊಳತ್ತೂರು ವಿಧಾನಸಭಾ ಕ್ಷೇತ್ರದಲ್ಲಿ 1 ಲಕ್ಷ ಮತಗಳನ್ನು ತೆಗೆದು ಹಾಕಿದ್ದು ಕೇವಲ 8 ಸಾವಿರ ಮತದಿಂದ ಮುಖ್ಯಮಂತ್ರಿಗಳನ್ನೇ ಸೋಲಿಸಲಾಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
SIR(Special Intensive Revision) ECI ಅನ್ನು ಬಿಜೆಪಿಯ ಚುನಾವಣಾ ಏಜೆಂಟ್ ರೀತಿ ಬಳಸಿ SIR ಮೂಲಕ 12 ರಾಜ್ಯಗಳಲ್ಲಿ 7.2 ಕೋಟಿ ಮತದಾರರನ್ನು ಕಡಿತ ಮಾಡಿ ಪ್ರಜಾಪ್ರಭುತ್ವ ಕಗ್ಗೋಲೆ ಮಾಡಿದ ಕೇಂದ್ರ ಬಿಜೆಪಿ ಸರ್ಕಾರ
2024ರಿಂದ ನಡೆದ 15 ವಿಧಾನಸಭೆ ಚುನಾವಣೆಗಳ ಪೈಕಿ ಬಿಜೆಪಿ 9 ವಿಧಾನಸಭೆ ಚುನಾವಣೆಗಳನ್ನು ಗೆದ್ದಿದೆ.
2026 ವಿಧಾನಸಭೆ ಚುನಾವಣೆ: ಪಶ್ಚಿಮ ಬಂಗಾಳ - 90.66 ಲಕ್ಷ (ಶೇ. 12) ಮತದಾರರ ಕಡಿತ, ಅಸ್ಸಾಂ- 2.43 ಲಕ್ಷ ಮತದಾರರ ಕಡಿತ, ಪಾಂಡಿಚೇರಿ- 77 (ಶೇ. 7) ಸಾವಿರ ಮತದಾರರ ಕಡಿತ ಮಾಡಿದೆ. 2025 ವಿಧಾನಸಭೆ ಚುನಾವಣೆ: ಬಿಹಾರ - 65 ಲಕ್ಷ (ಶೇ. 6) ಮತದಾರರ ಕಡಿತ, ದೆಹಲಿ- 5.20 ಲಕ್ಷ (ಶೇ. 3.9) ಮತದಾರರ ಕಡಿತ ಮಾಡಲಾಗಿದೆ.
2024 ವಿಧಾನಸಭೆ ಚುನಾವಣೆ: ಮಹಾರಾಷ್ಟ್ರ - 11.20 ಲಕ್ಷ ಮತದಾರರ ಕಡಿತ, ಒಡಿಶಾ - 8.50 ಲಕ್ಷ ಮತದಾರರ ಕಡಿತ, ಆಂಧ್ರ ಪ್ರದೇಶ- 6.20 ಲಕ್ಷ ಮತದಾರರ ಕಡಿತ ಹಾಗೂ ಹರಿಯಾಣ - 3.40 ಲಕ್ಷ ಮತದಾರರ ಕಡಿತ ಮಾಡಿರುವುದು ಅಂಕಿಅಂಶಗಳಿದ ಬಯಲಾಗಿದೆ ಎಂದು ಆರೋಪಿಸಿದ್ದಾರೆ.
ಬಾಕ್ಸ್
ಬಿಜೆಪಿಯ ಮತಗಳ್ಳತನದ ವಿರುದ್ಧ ಚುನಾವಣಾ ಆಯೋಗ ಜಾಣ ಕುರುಡು:
ಚುನಾವಣೆಗೂ ಮುನ್ನ SIR ಮಾಡಿದರು ಯಾಕೆ 2024 ಹರಿಯಾಣ ಚುನಾವಣೆಯಲ್ಲಿ 10 ಬೂತ್‌ಗಳಲ್ಲಿ 22 ಸಾರಿ ಒಬ್ಬ ಬ್ರೆಜಿಲ್ ಮಾಡೆಲ್ ಬಂದಿದ್ದು ಹೇಗೆ? 8 ಮತದಾರರಲ್ಲಿ 1 ಮತದಾನ ಕಳ್ಳತವಾಗಿರುವುದನ್ನು ವಿರೋಧ ಪಕ್ಷದ ರಾಹುಲ್ ಗಾಂಧಿ ಅವರು ಸಾಕ್ಷಿ ಸಮೇತ ಸಾಬೀತು ಮಾಡಿದರೂ ಚುನಾವಣಾ ಆಯೋಗ ಕಣ್ಮುಚ್ಚಿ ಕುಲುತ್ತಿರುವುದೇಕೆ?
SIRನಲ್ಲಿ ಮತದಾರರ ಪಟ್ಟಿಯಿಂದ ತೆಗೆದು ಹಾಕುವ ಮತಗಳ ಮಾಹಿತಿಯನ್ನು ಚುನಾವಣಾ ಆಯೋಗ ಯಾಕೆ ನೀಡುವುದಿಲ್ಲ? ಗೌಪ್ಯವಾಗಿ ಇಟ್ಟು ಯಾರಿಗೆ ಸಹಾಯ ಮಾಡುತ್ತಿದೆ.
ಚುನಾವಣಾ ಆಯೋಗವು ಬಿಹಾರದಲ್ಲಿ ನಡೆದ ಮೊದಲ ಹಂತದ SIRನಲ್ಲಿ 7.89 ಕೋಟಿ ಮತದಾರರ ಪಟ್ಟಿಯಲ್ಲಿ 65 ಲಕ್ಷ ಮತದಾರರನ್ನು ತೆಗೆದು ಹಾಕಿ ಮಾಹಿತಿ ನೀಡದೆ ನಂತರ ಕೋಟ್ ಛೀಮಾರಿ ಹಾಕಿದ ನಂತರ ಮಾಹಿತಿ ನೀಡಿದ್ದು ಯಾರಿಗೆ ಅನುಕೂಲ ಮಾಡಲು ಹೊರಟಿದೆ. ದೇಶಕ್ಕೆ ಭಯೋತ್ಪಾದನೆ ಎಷ್ಟು ದುಷ್ಪರಿಣಾಮವೋ ಅದೇ ರೀತಿ ಕೇಂದ್ರ ಬಿಜೆಪಿ ಸರ್ಕಾರದ ವೋಟ್ ಚೋರಿಯ ಭಯೋತ್ಪಾದನೆಯಿಂದ ಸಂವಿಧಾನದ ಕಗ್ಗೊಲೆ. ಮಹಾರಾಷ್ಟ್ರ ವಿಧಾನ ಸಭಾ ಚುನಾವಣೆಯಲ್ಲಿ ವಿವಿಧ ಮಾಧ್ಯಮಗಳು ಎಕ್ಸಿಟ್ ಪೋಲ್ ನಲ್ಲಿ 100 ಸಂಖ್ಯೆಯನ್ನು ದಾಟದ ಬಿಜೆಪಿ ಪಾಲಿತಾಂಶ ಬಂದಾಗ 135 ಸ್ಥಾನ ಗೆದ್ದಿದು SIRನ ಮೂಲಕ 40 ಲಕ್ಷ ವೋಟ್ ಸೇರಿಸಿದ್ದು ಯಾಕೆ?
ಹರಿಯಾಣ ಚುನಾವಣೆಯಲ್ಲಿ ಬಿಜೆಪಿ ಸೋಲುತ್ತೆ ಎಂದು ಮಾಧ್ಯಮಗಳಲ್ಲಿ ವರದಿ ಮಾಡಿದ ಮೇಲೂ ಗೆದ್ದ ಬಿಜೆಪಿಯ ಚುನಾವಣಾ ಮರ್ಮವೇನು, ಇದರ ಹಿಂದೆ ಚುನಾವಣಾ ಆಯೋಗದ ಕೈವಾಡವಿದೆಯೇ?
ಬಿಹಾರದಲ್ಲಿ ಸುಮಾರು 65 ಲಕ್ಷ ಮತದಾರರನ್ನು ತೆಗೆದು ಹಾಕುವ ಮೂಲಕ ದೇಶದ ನಾಗರೀಕರ ಹಕ್ಕನ್ನು ಕಸಿದುಕೊಂಡು ಚುನಾವಣಾ ಆಯೋಗಕ್ಕೆ ಸುಪ್ರೀಂಕೋರ್ಟ್ ಛೀಮಾರಿ ಹಾಕಿದ ನಂತರ ಸರಿಪಡಿಸಿದ ಬಿಜೆಪಿ ಚುನಾವಣಾ ಘಟಕ ECI.
ಕರ್ನಾಟಕದಲ್ಲಿ 2023ರ ನವೆಂಬರ್ ನಿಂದ ಜನವರಿ 15ರ ಒಳಗೆ 9 ಲಕ್ಷ ಮತ್ತು ಜನವರಿಯಿಂದ ಏಪ್ರಿಲ್ ವರೆಗೆ 16 ಲಕ್ಷ ಮತದಾರರು ಹೇಗೆ ಸೇರ್ಪಡೆ ಮಾಡಿದರು.
SIR ಎಷ್ಟು ಅನುಕೂಲವಾಗಿದೆ ಎಂದರೆ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 100 ಸೀಟುಗಳಲ್ಲಿ 89ರಲ್ಲಿ ಗೆದ್ದು Exit Pollಗಳ ನಿರೀಕ್ಷೆಗಳನ್ನು ಮೀರಿ ಗೆಲುವು ಸಾಧಿಸಿದ್ದು ಹೇಗೆ?
ಸಂವಿಧಾನವು ಭಾರತದ ಪ್ರತಿ ಪ್ರಜೆಗಳು ತಮ್ಮ ಮತದಾನದ ಹಕ್ಕನ್ನು ನೀಡುವ ಅಧಿಕಾರವನ್ನು ಚುನಾವಣಾ ಆಯೋಗ SIR ಮೂಲಕ ಕಿತ್ತುಕೊಳ್ಳುತ್ತಿದೆ.
ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ಮತಕದಿಯುವ ಪ್ರಯತ್ನ ಮಾಡಿದ್ದು ಯಾರು? ಮತದಾರರ ಪಟ್ಟಿಯಿಂದ ಒಂದು ಹೆಸರನ್ನು ತೆಗೆದು ಹಾಕಲು 80 ರೂ. ನೀಡದರ ಬಗ್ಗೆ ತನಿಖೆ ಏಕೆ ಮಾಡಲಿಲ್ಲ? ಎಂದು ಕೇಂದ್ರ ಬಿಜೆಪಿ ಸರಕಾರವನ್ನು ಪ್ರಶ್ನಿಸಿದ್ದಾರೆ.
ಬಾಕ್ಸ್
ಬಿಜೆಪಿಯ ಮತಗಳ್ಳತನ ಬಯಲು:
2024ರ ಲೋಕಸಭಾ ಚುನಾವಣೆ - ಮಹದೇವಪುರ ಮತದಾರರ ಪಟ್ಟಿ ಅಕ್ರಮ, 2024ರ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರಿನ ಮಹದೇವಪುರ ಕ್ಷೇತ್ರದಲ್ಲಿ ಮತದಾರರ ಪಟ್ಟಿಯಲ್ಲಿ 11,956 ನಕಲಿ ಮತದಾರರು, 40,009 ನಕಲಿ ವಿಳಾಸಗಳು ಮತ್ತು 10,452 ನಕಲಿ ನೋಂದಣಿಗಳು (ಒಂದೇ ಸಣ್ಣ ಮನೆಯ ವಿಳಾಸದಲ್ಲಿ 80 ಮತದಾರರು) ಮೂಲಕ 1 ಲಕ್ಷಕ್ಕೂ ಹೆಚ್ಚು ಮತಗಳನ್ನು ಕದಿಯಲಾಗಿದೆ,
2023ರ ಕರ್ನಾಟಕ ವಿಧಾನಸಭಾ ಚುನಾವಣೆ - ಆಳಂದ ಕ್ಷೇತ್ರದಲ್ಲಿ ಉದ್ದೇಶಪೂರ್ವಕ ಮತಗಳ ಕಡಿತ. ಫಾರ್ಮ್ 7 ಗಳನ್ನು ದುರುಪಯೋಗ ಮಾಡಿ ಕಾಂಗ್ರೆಸ್ ಮತದಾರರನ್ನು ಪಟ್ಟಿಯಿಂದ ಹೊರಗಿಡಲು ಪ್ರತಿ ಮತದಾರರನ್ನು ತೆಗೆಯಲು 80ರೂ. ನೀಡಿಲಾಗಿದೆ.
2024ರ ಹರಿಯಾಣ ವಿಧಾನಸಭೆ ಚುನಾವಣೆ - "ಬ್ರೆಜಿಲಿಯನ್ ಮಾಡೆಲ್". ಹರಿಯಾಣ ಚುನಾವಣೆಯಲ್ಲಿ ಸುಮಾರು 25 ಲಕ್ಷ ಮತಗಳ್ಳತನ ನಡೆದಿರುವುದು ಸಾಬೀತಾಗಿದೆ.
ಬ್ರೆಜಿಲಿಯನ್ ಮಾಡೆಲ್ ಒಬ್ಬರ ಭಾವಚಿತ್ರವನ್ನು ಹರಿಯಾಣದ ಹಲವಾರು ಮತದಾರರ ಗುರುತಿನ ಚೀಟಿಗಳಲ್ಲಿ ಬಳಸಲಾಗಿದ್ದು, ಅಂತಹ ಚೀಟಿಗಳ ಮೂಲಕ 22 ಬಾರಿ ಮತದಾನ ಮಾಡಿದ್ದನ್ನು ರಾಹುಲ್ ಗಾಂಧಿ ಅವರು ಸಾಕ್ಷಿ ಸಮೆತ ಬಯಲು ಮಾಡಿದ್ದಾರೆ ಎಂದು ಗದಗ ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷರು ಹಾಗೂ ಗದಗ ತಾಲೂಕು ಪಂಚ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ಅಶೋಕ ಮಂದಾಲಿ ತಿಳಿಸಿದ್ದಾರೆ..
إرسال تعليق