ಕಾಂಗ್ರೆಸ್ ಸರ್ಕಾರದ ಮೂರು ವರ್ಷದ ಅಭಿವೃದ್ಧಿಯ ಯಶೋಘಾತೆ: ಗದಗ ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಅಶೋಕ ಮಂದಾಲಿ ಬಣ್ಣನೆ
ಕರ್ನಾಟಕದ ಮಾಡಲ್ ದೇಶದ ಮಾಡಲ್ ಆಗಿ ಹೊರಹೊಮ್ಮಿದೆ
ಗದಗ: ಜನರಪರ ಮತ್ತು ಅಭಿವೃದ್ಧಿಪರ ಯೋಜನೆಗಳ ಮುಖಾಂತರ 3 ವರ್ಷ ಅಧಿಕಾರ ಪೂರೈಸಿದ ಕಾಂಗ್ರೆಸ್ ಸರ್ಕಾರ ಕರ್ನಾಟಕವನ್ನು ದೇಶದಲ್ಲೇ GSDP ಬೆಳವಣಿಯಲ್ಲಿ(ಶೇ. 10.2) 1ನೇ ಸ್ಥಾನ, ತೆರಿಗೆ ಸಂಗ್ರಹ ಮತ್ತು ವಿದೇಶಿ ಬಂಡವಾಳ ಹೂಡಿಕೆಯಲ್ಲಿ 2ನೇ ಸ್ಥಾನ ಮತ್ತು ತಲಾವಾರು ಆದಾಯದಲ್ಲಿ 1ನೇ ಸ್ಥಾನಕ್ಕೆ ತಂದು ಕರ್ನಾಟಕದ ಮಾಡಲ್ ದೇಶದ ಮಾಡಲ್ ಆಗಿ ಹೊರಹೊಮ್ಮಿದೆ ಎಂದು ಗದಗ ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷರು ಹಾಗೂ ಗದಗ ತಾಲೂಕು ಪಂಚ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ಅಶೋಕ ಮಂದಾಲಿ ಬಣ್ಣಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ದೇಶದಲ್ಲೇ ಮೊದಲ ಬಾರಿಗೆ ಗ್ಯಾರಂಟಿ ಯೋಜನೆಗಳ ಮೂಲಕ 1.31 ಲಕ್ಷ ಕೋಟಿಗೂ ಹೆಚ್ಚು ಹಣವನ್ನು ನೇರವಾಗಿ ಜನರಿಗೆ ತಲುಪಿಸಿ ಕರ್ನಾಟಕ ಅಭಿವೃದ್ದಿಯ ಮಾಡೆಲ್ ಇಂದು ಉದ್ಯೋಗ ಸೃಷ್ಟಿಸುವ ಕಣಜವಾಗಿದೆ.
ಗ್ಯಾರಂಟಿ ಯೋಜನೆಗಳಿಂದ ಕರ್ನಾಟಕದಲ್ಲಿ ಅಭಿವೃದ್ಧಿ ಕಣ್ಮರೆಯಾಗಿ ದಿವಾಳಿಯಾಗುತ್ತದೆ ಎಂದು ಹೇಳಿದ ಬಿಜೆಪಿ-ಜೆಡಿಎಸ್ ನಾಯಕರಿಗೆ ಕಾಂಗ್ರೆಸ್ ಸರ್ಕಾರದ ಅಭಿವೃದ್ಧಿ ಯೋಜನೆಗಳೇ ತಕ್ಕ ಉತ್ತರ ನೀಡಿವೆ.
ಕಾಂಗ್ರೆಸ್ ಸರ್ಕಾರ 2023ರ ವಿಧಾನಸಭಾ ಚುನಾವಣೆಯಲ್ಲಿ ನೀಡಿದ 593 ಭರವಸೆಗಳಲ್ಲಿ 242 ಭರವಸೆಗಳನ್ನು ಈಡೇರಿಸಿ ಶೇ. 40ರಷ್ಟು ಗುರಿ ಸಾಧಿಸಿ ಕನ್ನಡಿಗರಿಗೆ ನುಡಿದಂತೆ ನಡೆಯುತ್ತಿದೆ ಕಾಂಗ್ರೆಸ್ ಸರ್ಕಾರ.
ಕಾರ್ಮಿಕ ಬಲ ಸಮೀಕ್ಷೆ ಪ್ರಕಾರ ದೇಶದ ಸರಾಸರಿ ಶೇ. 18ರಷ್ಟು ನಿರುದ್ಯೋಗಕ್ಕೆ ಹೋಲಿಸಿದರೆ ಕರ್ನಾಟಕದಲ್ಲಿ ನಿರುದ್ಯೋಗ ದರವು ಶೇ. 2.5ರಷ್ಟಿದ್ದು ಕಾಂಗ್ರೆಸ್ ಸರ್ಕಾರದ ಕೈಗಾರಿಕೋದ್ಯಮ ಬೆಳವಣಿಗೆಯೇ ಇದಕ್ಕೆ ಸಾಕ್ಷಿಯಾಗಿದೆ.
ಹಿಂದಿನ ಭ್ರಷ್ಟ ಬಿಜೆಪಿ ಸರ್ಕಾರದಿಂದ ನಲುಗಿದ್ದ ಕನ್ನಡಿಗರಿಗೆ ಗ್ಯಾರಂಟಿ ಯೋಜನೆ ಮೂಲಕ ಆರ್ಥಿಕ ಬಲ ತುಂಬಿ ಅಭಿವೃದ್ಧಿಪರ ಯೋಜನೆಗಳನ್ನು ಜಾರಿ ಮಾಡಿ ಕಳೆದ 3 ವರ್ಷದಲ್ಲಿ ಸುಮಾರು ದೊಡ್ಡ ದೊಡ್ಡ ಕಂಪನಿಗಳ ಜೊತೆಗೆ 117 ಒಪ್ಪಂದದಿಂದ 6.70 ಲಕ್ಷ ಕೋಟಿ ರೂ. ಹೂಡಿಕೆ ಆಕರ್ಷಿಸಿ 2.47 ಲಕ್ಷ ನೇರ ಉದ್ಯೋಗಗಳನ್ನು ಸೃಷ್ಟಿಸಿದೆ.
2026ರ ಮಾರ್ಚ್‌ನಲ್ಲಿ ಬಾಗಲಕೋಟೆ, ವಿಜಯಪುರ, ಚಿತ್ರದುರ್ಗ, ರಾಮನಗರ, ಕೋಲಾರ ಸೇರಿದಂತೆ 13 ಜಿಲ್ಲೆಗಳಲ್ಲಿ 37 ಹೊಸ ಕೈಗಾರಿಕೆಗಳಿಗೆ ಒಟ್ಟು 4,824.31 ಕೋಟಿ ರೂ. ಬಂಡವಾಳ ಹೂಡಿಕೆಗೆ ಅನುಮೋದನೆ ನೀಡಿ 14,525 ಉದ್ಯೋಗ ಸೃಷ್ಟಿಸಿ ಕೈಗಾರಿಕೋದ್ಯಮ ಮತ್ತು ಉದ್ಯೋಗ ಸೃಷ್ಟಿಯ ಕ್ರಾಂತಿ ಮಾಡಿದೆ.
ವಿಶ್ವದ ಅತೀ ದೊಡ್ಡ ಆರ್ಥಿಕ ಪುನಶ್ವೇತನ ಮತ್ತು ಸಾಮಾಜಿಕ ಭದ್ರತಾ ಯೋಜನೆ (ಗ್ಯಾರಂಟಿ ಯೋಜನೆ) ತಂದು ಸುಮಾರು 4.5 ಕೋಟಿ ಕನ್ನಡಿಗರಿಗ ಪ್ರತಿ ಮನೆಗೂ 8,000 ರೂ.ವರೆಗೂ ನೀಡಿ ಬಡವರ ಬಾಳಿಗೆ ಬೆಳಕಾಗಿದೆ. ಕೇರ್ ಎಡ್ಜ್ ವರದಿ ಪ್ರಕಾರ ದೇಶದಲ್ಲೇ ಅತ್ಯುತ್ತಮ ಸಾಧನೆ ಮಾಡಿದ ರಾಜ್ಯಗಳ ಪೈಕಿ ಕರ್ನಾಟಕ 3ನೇ ಸ್ಥಾನದಲ್ಲಿದ್ದು ಕಾಂಗ್ರೆಸ್ ಸರ್ಕಾರದ ಅಭಿವೃದ್ಧಿಯ ಕೈಗನ್ನಡಿಯಾಗಿದೆ.
ಕೃಷ್ಣಾ ಮೇಲ್ದಂಡೆ ಯೋಜನೆ 3ನೇ ಹಂತದ ಭೂ-ಸ್ವಾಧೀನಕ್ಕೆ 2026ರ ಕರ್ನಾಟಕ ಬಜೆಟ್‌ನಲ್ಲಿ ನೀಡಿದ್ದ 3 ಸಾವಿರ ಕೋಟಿ ರೂ. ಅನುದಾನವನ್ನು 5 ಸಾವಿರ ಕೋಟಿ ರೂ.ಗೆ ಹೆಚ್ಚಿಸಲು ನಿರ್ಧರಿಸಲಾಗಿದ್ದು, ಸ್ವಯಂಪ್ರೇರಣೆಯಿಂದ ಭೂಮಿ ನೀಡುವ ರೈತರಿಗೆ ನೀರಾವರಿ ಜಮೀನಿಗೆ 40 ಲಕ್ಷ ರೂ. ಹಾಗೂ ಖುಷ್ಕಿ ಜಮೀನಿಗೆ 30 ಲಕ್ಷ ರೂ. ಪರಿಹಾರವನ್ನು ಒಂದೇ ಬಾರಿಗೆ ನೀಡಲಾಗುತ್ತಿದೆ.
ಭಾರತದ ಮೊದಲ 2024-29 ಗ್ಲೋಬಲ್ ಕೇಪಬಿಲಿಟಿ ಸೆಂಟರ್ ನೀತಿಯನ್ನು ಪ್ರಾರಂಭಿಸಿ ರಾಜ್ಯವನ್ನು ಜಾಗತಿಕ ಸಾಮರ್ಥ್ಯ ಕೇಂದ್ರಗಳ ತಾಣವನ್ನಾಗಿ ಮಾಡಿದ್ದು, 2029ರ ವೇಳೆಗೆ 50 ಬಿಲಿಯನ್ ಆರ್ಥಿಕತೆ ಉತ್ಪಾದಿಸುವ 500 ಹೊಸ GCCಗಳನ್ನು ಸ್ಥಾಪಿಸಿ 3.5 ಲಕ್ಷ ಹೊಸ ಉದ್ಯೋಗಗಳನ್ನು ಸೃಷ್ಟಿಸಲು ಹೊಸ GCC ನೀತಿ ಗುರಿ ಹೊಂದಿದೆ.
2024-29 ಗ್ಲೋಬಲ್ ಕೇಪಬಿಲಿಟಿ ಸೆಂಟರ್(GCC) ನೀತಿಯನ್ನು ಪ್ರಾರಂಭಿಸಿದ ಕೇವಲ ಒಂದು ವರ್ಷದಲ್ಲಿ ಅಂದರೆ 2025ರಲ್ಲಿ 50 ಹೊಸ GCC ಕರ್ನಾಟಕದಲ್ಲಿ ಪ್ರಾರಂಭವಾಗಿದೆ.
ದೇಶದಲ್ಲೇ ಕರ್ನಾಟಕವನ್ನು ವಿವಿಧ ಕ್ಷೇತ್ರಗಳಲ್ಲಿ ಅಗ್ರ ಸ್ಥಾನಕ್ಕೆ ತಂದ ಕಾಂಗ್ರೆಸ್ ಸರ್ಕಾರ:
ಶೇ. 10.2ರ GSDP ಬೆಳವಣಿಗೆಯಿಂದ 1ನೇ ಸ್ಥಾನ. ತಲಾದಾಯದಲ್ಲಿ1ನೇ ಸ್ಥಾನ. ನ್ಯಾಯ ಒದಗಿಸುವುದರಲ್ಲಿ 1ನೇ ಸ್ಥಾನ. ತೆರಿಗೆ ಸಂಗ್ರಹದಲ್ಲಿ 2ನೇ ಸ್ಥಾನ. ವಿದೇಶಿ ಬಂಡವಾಳ ಹೂಡಿಕೆಯಲ್ಲಿ 2ನೇ ಸ್ಥಾನ. ಫಸಲ್ ಭಿಮಾ ಯೋಜನೆ ಅನುಷ್ಠಾನದಲ್ಲಿ 2ನೇ ಸ್ಥಾನ.
ಪಂಚ ಗ್ಯಾರಂಟಿ ಯೋಜನೆಗಳಿಗೆ ಒಟ್ಟು 1.31 ಲಕ್ಷ ಕೋಟಿ ರೂ. ಅನುದಾನ: ಕಳೆದ ಮೂರು ವರ್ಷಗಳ ಅವಧಿಯಲ್ಲಿ ಗೃಹಜ್ಯೋತಿ ಯೋಜನೆಗೆ 28,657 ಕೋಟಿ ರೂ. ನೀಡಿದ್ದು 1.64 ಕೋಟಿ ಫಲಾನುಭಗಳಿಗೆ ತಲುಪಿದೆ. ಗೃಹಲಕ್ಷ್ಮೀ ಯೋಜನೆಗೆ 74,180 ಕೋಟಿ ರೂ. ನೀಡಿದ್ದು 1.24 ಕೋಟಿ ಗೃಹಿಣಿಯರಿಗೆ ತಲುಪಿದೆ. ಶಕ್ತಿ ಯೋಜನೆಗೆ 18,625 ಕೋಟಿ ರೂ. ಖರ್ಚು ನೀಡಿದ್ದು 716 ಕೋಟಿಗೂ ಹೆಚ್ಚು ಮಹಿಳಾ ಪ್ರಯಾಣಿಕರು ಪ್ರಯಾಣಿಸಿದ್ದಾರೆ. ಅನ್ನಭಾಗ್ಯ ಯೋಜನೆಗೆ 20,211 ಕೋಟಿ ರೂ. ನೀಡಿದ್ದು 4.21 ಕೋಟಿ ಫಲಾನುಭಗಳಿಗೆ ತಲುಪಿದೆ. ಯುವನಿಧಿ ಯೋಜನೆಗೆ 950 ಕೋಟಿ ರೂ. ನೀಡಿದ್ದು 2.58 ಲಕ್ಷ ಪದವೀಧರರು ಮತ್ತು ಡಿಪ್ಲೋಮಾ ಫಲಾನುಭಗಳಿಗೆ ತಲುಪಿದೆ.
ಕಾಂಗ್ರೆಸ್ ಸರ್ಕಾರದ 6ನೇ ಭೂ ಗ್ಯಾರಂಟಿ: ಯಶಸ್ವಿಯಾಗಿ 5 ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿ ನುಡಿದಂತೆ ನಡೆದ ಕಾಂಗ್ರೆಸ್ ಸರ್ಕಾರ ಈಗಾಗಲೇ E-Khata ಅಭಿಯಾನದ ಮೂಲಕ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ 23 ಲಕ್ಷ E-Khata ನೀಡಲಾಗಿದ್ದು ದೇಶದಲ್ಲೇ ದಾಖಲೆಯಾಗಿದೆ. Property Ownership Drive ಮೂಲಕ ಪ್ರಸ್ತುತ ಇರುವ 7 ಲಕ್ಷ ಬಿ ಖಾತೆಗಳನ್ನು ಬಿ ಖಾತೆಯಿಂದ ಎ ಖಾತೆ ಮಾಡಿಕೊಳ್ಳಲು ಗೈಡೆನ್ಸ್ ವ್ಯಾಲ್ಯೂ ಶೇಕಡಾ 5ರಿಂದ 2ಕ್ಕೆ ಇಳಿಕೆ ಮಾಡಿದ ಕಾಂಗ್ರೆಸ್ ಸರ್ಕಾರ 6ನೇ ಭೂ ಗ್ಯಾರಂಟಿಯನ್ನು ನೀಡಿದೆ.
ರಾಜ್ಯಾದ್ಯಂತ ಭೂ ದಾಖಲೆ ಇಲ್ಲದೆ ತಾಂಡ, ಹಟ್ಟಿ ಗೊಲ್ಲರಹಟ್ಟಿಗಳಲ್ಲಿ ವಾಸ ಮಾಡುತ್ತಿದ್ದ ಲಕ್ಷಾಂತರ ನಿವಾಸಿಗಳಿಗೆ ಹಕ್ಕುಪತ್ರ ನೀಡಲು ಕಾಂಗ್ರೆಸ್ ಸರ್ಕಾರ ಕರ್ನಾಟಕ ಭೂ ಸುಧಾರಣಾ ಕಾಯ್ದೆಗೆ 2017ರಲ್ಲಿ ಕಾನೂನು ತಿದ್ದುಪಡಿ ಮಾಡಿದ ನಂತರ 2017 ರಿಂದ 2023ರ ಮೇ ವರೆಗೆ 6 ವರ್ಷಗಳಲ್ಲಿ 1.08 ಲಕ್ಷ ನಿವಾಸಿಗಳಿಗೆ ಹಕ್ಕುಪತ್ರಗಳನ್ನು ನೀಡಲಾಗಿತ್ತು. ಆದರೆ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕೇವಲ 2 ವರ್ಷದ ಅವಧಿಯಲ್ಲಿ ಮೇ 2023 ರಿಂದ 2025ರವರೆಗೆ 1.11 ಲಕ್ಷ ಹಕ್ಕುಪತ್ರಗಳನ್ನು ನೀಡಲಾಗಿದೆ. 14 ಫೆಬ್ರವರಿ 2026ರಂದು ಕರ್ನಾಟದಲ್ಲಿ 1,000 ದಿನಗಳ ಆಡಳಿತವನ್ನು ಪೂರೈಸಿದ ಕಾಂಗ್ರೆಸ್ ಸರ್ಕಾರ ಹಾವೇರಿಯಲ್ಲಿ ಕಂದಾಯ ಗ್ರಾಮಗಳ 1 ಲಕ್ಷ ಕುಟುಂಬಗಳಿಗೆ ಹಕ್ಕುಪತ್ರಗಳನ್ನು ನೀಡಲಾಗಿದೆ.
ಕಾಂಗ್ರೆಸ್ ಸರ್ಕಾರದಿಂದ ಕರ್ನಾಟಕದಲ್ಲಿ ಅಭಿವೃದ್ಧಿಯ ಪರ್ವ:
ವಿಶ್ವದ ಅತ್ಯುನತ ವಿಶ್ವ ವಿದ್ಯಾಲಯಗಳು, ಆಸ್ಪತ್ರೆಗಳು, ಶೈಕ್ಷಣಿಕ ಸಂಸ್ಥೆಗಳನ್ನು ದೊಡ್ಡಬಳ್ಳಾಪುರ ಮತ್ತು ದಾಬಸ್‌ಪೇಟೆ ಮಧ್ಯೆ 2 ಸಾವಿರ ಎಕರೆ ಪ್ರದೇಶದಲ್ಲಿ 'ಕೆಎಚ್‌ಐಆರ್ ಸಿಟಿ'ಯನ್ನು ಅಂತಾರಾಷ್ಟ್ರೀಯ ಗುಣಮಟ್ಟದ ಮೂಲಸೌಕರ್ಯದೊಂದಿಗೆ ನಿರ್ಮಿಸುತ್ತಿರುವ ಕಾಂಗ್ರೆಸ್ ಸರ್ಕಾರ. ಈ ಯೋಜನೆಯಿಂದ 40
ಸಾವಿರ ಕೋಟಿ ರೂ. ಬಂಡವಾಳ ಹೂಡಿಕೆ ಹಾಗೂ 80 ಸಾವಿರಕ್ಕೂ ಉದ್ಯೋಗ ಅವಕಾಶಗಳು ಸೃಷ್ಟಿಯಾಗಲಿದೆ.
ಕಲಬುರಗಿ ಜಿಲ್ಲೆಯ 1,000 ಎಕರೆ ಪ್ರದೇಶದಲ್ಲಿ ಪಿಪಿಪಿ ಮಾದರಿಯಲ್ಲಿ ಮೆಗಾ ಜವಳಿ ಪಾರ್ಕ್ ಸ್ಥಾಪಿಸುವ ಯೋಜನೆ ಕೈಗೊಂಡಿರುವ ಕಾಂಗ್ರೆಸ್ ಸರ್ಕಾರ. 1 ಲಕ್ಷ ಜನರಿಗೆ ನೇರ ಉದ್ಯೋಗ ಹಾಗೂ 2 ಲಕ್ಷ ಜನರಿಗೆ ಪರೋಕ್ಷ ಉದ್ಯೋಗ ಸೃಷ್ಟಿಸಲು ಪಣತೊಟ್ಟಿದೆ. ಹಿಂದಿನ ಬಿಜೆಪಿ ಸರ್ಕಾರದದಿಂದ ದುರಾಡಳಿತದಿಂದ ನರಳುತ್ತಿದ್ದ ಪೌರಕಾರ್ಮಿಕರ ಕೈಹಿಡಿದ ಕಾಂಗ್ರೆಸ್ ಸರ್ಕಾರ ಒಟ್ಟು 20 ಸಾವಿರ ಪೌರಕಾರ್ಮಿಕರನ್ನು ಖಾಯಂಗೊಳಿಸಿದೆ.
ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಆಕ್ಸಿಜನ್ ಕೊರತೆಯಿಂದ 2021ರ ಮೇ 2ರಂದು ಚಾಮರಾಜನಗರ ಜಿಲ್ಲಾ ಆಸ್ಪತ್ರೆಯಲ್ಲಿ 36 ಕೋವಿಡ್-19 ರೋಗಿಗಳು ಸಾವನ್ನಪ್ಪಿದ್ದು ಕಾಂಗ್ರೆಸ್ ಸರ್ಕಾರ ಸಂತ್ರಸ್ತರ ಕುಟುಂಬಕ್ಕೆ ವಿದ್ಯಾರ್ಹತೆ ಆಧಾರದಲ್ಲಿ ಸರ್ಕಾರಿ ಉದ್ಯೋಗ ಭರವಸೆ ನೀಡಿದ್ದನ್ನು ಏಪ್ರಿಲ್ 2026ರಲ್ಲಿ 21 ಜನರಿಗೆ ಸರ್ಕಾರಿ ಉದ್ಯೋಗ ನೀಡಿ ಕೊಟ್ಟ ಭರವಸೆಯನ್ನು ಈಡೇರಿಸಿದೆ.
ಖಾಸಗಿ ವಲಯದ ಉದ್ದಿಮೆಗಳಲ್ಲಿ ಪ.ಜಾತಿ/ಪ.ಪಂಗಡದ ಅಭ್ಯರ್ಥಿಗಳಿಗೆ ಉದ್ಯೋಗಾವಕಾಶ ಒದಗಿಸುವ ಅತ್ಯಂತ ಮಹತ್ವಾಕಾಂಕ್ಷೆಯ "ಆಶಾದೀಪ" ಕಾರ್ಯಕ್ರವು ಪ್ರತಿ ಅಭ್ಯರ್ಥಿಗೆ ಮಾಸಿಕ ತಲಾ ಮೂರು ಸಾವಿರ ರೂ.ಗಳಿಗೆ ನೀಡುತ್ತಿದ್ದು 4,695 ಫಲಾನುಭವಿಗಳಿಗೆ ಅನುಕೂಲವಾಗಿದೆ.
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಅಧ್ಯಕ್ಷ ಫಿಲೆಮನ್ ಯಾಂಗ್ ಕಾಂಗ್ರೆಸ್ ಸರ್ಕಾರದ 5 ಗ್ಯಾರಂಟಿ ಯೋಜನೆಯನ್ನು ಪ್ರಶಂಸಿದ್ದಾರೆ.
2024ರಲ್ಲಿ ಉದ್ಯೋಗದ ವಿಷಯದಲ್ಲಿ ಭಾರತದಲ್ಲಿ ಮುಂಚೂಣಿಯಲ್ಲಿರುವ ಕರ್ನಾಟಕ ಶೇ. 63.93ರಷ್ಟು ಉದ್ಯೋಗಾವಕಾಶವನ್ನು ಹೊಂದಿದ್ದು, ಉದ್ಯೋಗ ಪಡೆಯಲು ಅರ್ಹರಾಗಿರುವ ಪದವೀಧರರಲ್ಲಿ 7ನೇ ಸ್ಥಾನವನ್ನು ಪಡೆದುಕೊಂಡಿದೆ. ಕಾಂಗ್ರೆಸ್ ಸರ್ಕಾರ 2024-29 ಕೈಗಾರಿಕಾ ನೀತಿ ಪ್ರಾರಂಭಿಸಿದ್ದು 2029 ರ ವೇಳೆಗೆ 20 ಲಕ್ಷ ಉದ್ಯೋಗಗಳನ್ನು ಸೃಷ್ಟಿಸಿ 7.5 ಲಕ್ಷ ಕೋಟಿ ರೂ. ಹೂಡಿಕೆಯನ್ನು ಆಕರ್ಷಿಸುವ ಗುರಿಯನ್ನು ಹೊಂದಿದೆ.
ದೇಶದಲ್ಲೇ ವೇಗವಾಗಿ ಬೆಳೆಯುತ್ತಿರುವ ಕರ್ನಾಟವು ಹೊರ ರಾಜ್ಯಗಳಿಂದ ಲಕ್ಷಾಂತರ ಉದ್ಯೋಗ ಅರಸಿ ಬರುವ ಜನರಿಗೆ ತಂಗುದಾಣವಾಗಿದ್ದು ಎಲ್ಲರಿಗೂ ತುರ್ತು ಸಂದರ್ಭದಲ್ಲಿ ಕಾನೂನು ನೆರವು ಪಡೆಯಲು ಅನುಕೂಲವಾಗಲು 112 ಸಹಾಯವಾಣಿಯನ್ನು 10ಕ್ಕೂ ಹೆಚ್ಚು ಭಾಷೆಯಲ್ಲಿ ಭಾರತದ ಮೊದಲ AI-ಚಾಲಿತ ಬಹುಭಾಷಾ ತುರ್ತು ಪ್ರತಿಕ್ರಿಯೆ ವ್ಯವಸ್ಥೆ ಕಲ್ಪಿಸಿದ ಕಾಂಗ್ರೆಸ್ ಸರ್ಕಾರ. ಭಾರತದ IT Hub ಹಾಗೂ Silicon City ಆಗಿ ಬೆಂಗಳೂರನ್ನು ಜಾಗತಿಕ ಮಟ್ಟದಲ್ಲಿ ಹಸರಾಗುವಂತೆ ಮಾಡಿದ ಕಾಂಗ್ರೆಸ್ ಸರ್ಕಾರದ ಮಹಿಳಾ ಸಬಲೀಕರಣಕ್ಕೆ ಹೆಚ್ಚು ಒತ್ತು ನೀಡಿದ ಪರಿಣಾಮದಿಂದ ಮಹಿಳಾ ಸುರಕ್ಷತೆ ಮತ್ತು ಉದ್ಯೋಗ ಅವಕಾಶಗಳಲ್ಲಿ ಬೆಂಗಳೂರು ಭಾರತದ ನಂ. 1 ನಗರವಾಗಿ ಹೊರಹೊಮ್ಮಿದೆ ಎಂದು Avatar Group ಪ್ರಕಟಿಸಿದ 2025ರ TCWI ವರದಿಯೇ ಸಾಕ್ಷಿಯಾಗಿದೆ.
ಗ್ರಾಮೀಣ ಯುವಕರಿಗೆ ಭವಿಷ್ಯವನ್ನು ಉಜ್ವಲಗೊಳಿಸಲು 5,770 ಅರಿವು ಕೇಂದ್ರಗಳನ್ನು (ಜ್ಞಾನ ಕೇಂದ್ರಗಳು) ಸ್ಥಾಪಿಸಲಾಗಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 2000 ಕೋಟಿ ರೂ. ವೆಚ್ಚದ ಹೈಟೆಕ್ ರೇಷ್ಮೆ ಗೂಡಿನ ಮಾರುಕಟ್ಟೆ, ಹೆಚ್.ಎನ್.ವ್ಯಾಲಿ 3ನೇ ಹಂತದ 164 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಮತ್ತು ವಿವಿಧ ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ ನೆರವೇರಿಸಲಾಗಿದೆ.
ಕಾಂಗ್ರೆಸ್ ಸರ್ಕಾರ ದಕ್ಷಿಣ ಕನ್ನಡ, ತುಮಕೂರು, ಕೋಲಾರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ 1,741.60 ಕೋಟಿ ರೂ. ಮೌಲ್ಯದ ಬಂಡವಾಳ ಹೂಡಿಕೆಯ 63 ಯೋಜನೆಗಳ ಅನುಮೋದನೆ ನೀಡಿ ಒಟ್ಟು 12500 ಉದ್ಯೋಗ ಸೃಷ್ಟಿಯಾಗಲಿದೆ.
ದೊಡ್ಡ ದೊಡ್ಡ ಕಂಪನಿಗಳ ಜೊತೆಗೂಡಿ 1 ಲಕ್ಷ ಯುವಜನತೆಗೆ ತರಬೇತಿ ನೀಡುತ್ತಿದೆ.
ರಾಜ್ಯದಲ್ಲಿ ಒಂದೇ ಬಾರಿ 20 ಸಾವಿರ ಪೌರಕಾರ್ಮಿಕಗೆ ಮಾಸಿಕ 39 ಸಾವಿರ ರೂ. ನೀಡಿ ಕಾಯಂಗೊಳಿಸಿದ ಕಾಂಗ್ರೆಸ್ ಸರ್ಕಾರ.
ಗ್ಯಾರಂಟಿ ಯೋಜನೆಗಳ ಮೂಲಕ ರಾಜ್ಯದ ಮಹಿಳೆಯರ ಸಬಲೀಕರಣ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರ 100 ಕೇಂದ್ರದಲ್ಲಿ 30 ಸಾವಿರ ಮಹಿಳೆಯರಿಗೆ ಉದ್ಯೋಗಾಧಾರಿತ ಕೌಶಲ್ಯ ತರಬೇತಿ ನೀಡಲು ಸ್ವ-ಉದ್ಯೋಗ ಯೋಜನೆ ಜಾರಿಮಾಡಿದೆ.
ಮೈಸೂರು ಕರ್ನಾಟಕ ಭಾಗದ ಅಭಿವೃದ್ಧಿಗಾಗಿ 3,647 ಕೋಟಿ ರೂ. ಮೊತ್ತದ ಕಾಮಗಾರಿಗಳನ್ನು ಜಾರಿ ಮಾಡಿದೆ. ಎತ್ತಿನಹೊಳೆ ಯೋಜನೆಯಿಂದ ಕೊರಟಗೆರೆ ಕ್ಷೇತ್ರದ 62 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಜಾರಿ ಮಾಡಿದೆ. ಕಲಬುರಗಿಯ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಆವರಣದಲ್ಲಿ 315 ಹಾಸಿಗೆ ಸಾಮರ್ಥ್ಯದ ಸೂಪರ್ ಸ್ಪೆಷಾಲಿಟಿ ಬ್ಲಾಕ್ ನಿರ್ಮಾಣ ಮಾಡಿದೆ. ಕಳೆದ ಒಂದು ವರ್ಷದಲ್ಲಿ 48 ಸಾವಿರ ಕೋಟಿ ಹೂಡಿಕೆಗೆ ಅನುಮೋದನೆ ನೀಡಿದ ರಾಜ್ಯ ಸರ್ಕಾರ. ಒಟ್ಟು 34,115 ಕೋಟಿ ರೂ. ಮೊತ್ತದ ಬಂಡವಾಳ ಹೂಡಿಕೆಯ 14 ಉದ್ಯಮಗಳ ಸ್ಥಾಪನೆಗೆ ಒಪ್ಪಿಗೆ ನೀಡಿದ್ದು ಇದರಿಂದ 13,308 ಜನರಿಗೆ ಉದ್ಯೋಗ ದೊರೆತಿದೆ.
ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳ ಪ್ರವರ್ಗ-1, 2A ಮತ್ತು 2B ಗುತ್ತಿಗೆದಾರರಿಗೆ ಕಾಮಗಾರಿಗಳಲ್ಲಿ ಮೀಸಲಾತಿಯನ್ನು ಎರಡು ಕೋಟಿ ರೂ.ಗಳಿಗೆ ಹೆಚ್ಚಳ ಮಾಡಿದೆ.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಒಟ್ಟು 31 ವಸತಿ ಶಾಲೆಗಳನ್ನು ಪಿ.ಯು ಕಾಲೇಜಗಳನ್ನಾಗಿ ಉನ್ನತೀಕರಣವಾಗಿವೆ. ದೇಶದ ಪ್ರತಿಷ್ಠಿತ 100 ಶಿಕ್ಷಣ ಸಂಸ್ಥೆಗಳಲ್ಲಿ ಪದವಿ/ ಸ್ನಾತಕೋತ್ತರ ಪದವಿ ಕೋರ್ಸ್‌ಗಳಿಗೆ ಪ್ರವೇಶ ಪಡೆಯುವ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕೆ ಬೆಂಬಲ ನೀಡಲು ಪ್ರೋತ್ಸಾಹಧನ ನೀಡಲಾಗುತ್ತಿದೆ.
ಉದ್ಯೋಗ ಸೃಷ್ಟಿಗೆ ಆದ್ಯತೆ: ಇನ್ವೆಸ್ಟ್ ಕರ್ನಾಟಕ 2025 ಕಾರ್ಯಕ್ರಮದಲ್ಲಿ 10 ಲಕ್ಷ ಕೋಟಿ ರೂ. ಹೂಡಿಕೆಯ ಗುರಿಯನ್ನು ಶೇ. 100ರಷ್ಟು ಗುರಿ ಸಾಧಿಸಿ 10.27 ಲಕ್ಷ ಕೋಟಿ ರೂ. ಹೂಡಿಕೆಯನ್ನು ಕರ್ನಾಟಕಕ್ಕೆ ತಂದಿದ್ದು ಇದರಿಂದ 6 ಲಕ್ಷ ಉದ್ಯೋಗಗಳು ಸೃಷ್ಟಿಯಾಗಲಿದೆ. 10.27 ಲಕ್ಷ ಕೋಟಿ ರೂ. ಹೂಡಿಕೆಯಲ್ಲಿ 6.23 ಲಕ್ಷ ಕೋಟಿ ರೂ. ಒಡಂಬಡಿಕೆಯಾಗಿದ್ದು ಉಳಿದ 4.03 ಲಕ್ಷ ಕೋಟಿ ರೂ. ಹೂಡಿಕೆಗೆ ಘೋಷಣೆಯಾಗಿದೆ.
ಕಾಂಗ್ರೆಸ್ ಸರ್ಕಾರ ಕೇವಲ ಹೂಡಿಕೆಯ ಶೇ. 100ರ ಗುರಿಯನ್ನು ಸಾಧಿಸಿಲ್ಲ, ಬದಲಾಗಿ 5 ವರ್ಷ ಬಿಜೆಪಿ ಅವಧಿಯ (2018-2023) 3.52 ಲಕ್ಷ ಉದ್ಯೋಗ ಸೃಷ್ಟಿಸುವ 4.29 ಲಕ್ಷ ಕೋಟಿ ರೂ. ಹೂಡಿಕೆಯನ್ನು ಮೀರಿ ಕೇವಲ ಒಂದೇ ವರ್ಷದಲ್ಲೇ 6 ಲಕ್ಷ ಉದ್ಯೋಗ ಸೃಷ್ಟಿಸುವ 10.27 ಲಕ್ಷ ಕೋಟಿ ಹೂಡಿಕೆಯನ್ನು ತಂದು ದಾಖಲೆ ಬರೆದಿದೆ.
ವಲಯವಾರು ಹೂಡಿಕೆಯಲ್ಲಿ ಉತ್ಪಾದನಾ ವಲಯದ ಕೋರ್ ವಿಭಾಗದಲ್ಲಿ ಅತಿ ಹೆಚ್ಚು 1.59 ಲಕ್ಷ ಕೋಟಿ ರೂ.. ಉತ್ಪಾದನಾ ವಲಯದ ಸನ್‌ರೈಸ್ ವಿಭಾಗದಲ್ಲಿ 1.38 ಲಕ್ಷ ಕೋಟಿ ರೂ. ಉತ್ಪಾದನಾ ವಲಯದ ಸಾಮಾನ್ಯ ವಿಭಾಗದಲ್ಲಿ 1.05 ಲಕ್ಷ ಕೋಟಿ ರೂ. ಮೂಲ ಸೌಕರ್ಯ ಮತ್ತು ಕೈಗಾರಿಕೆ ವಿಭಾಗದಲ್ಲಿ 1.07 ಲಕ್ಷ ಕೋಟಿ ರೂ. ಹಾಗೂ ಸ್ಟಾರ್ಟ್ ಅಪ್ ಕ್ಯಾಪಿಟಲ್‌ನಲ್ಲಿ 89,868 ಕೋಟಿ ರೂ. ಹೂಡಿಕೆ ಘೋಷಣೆಯಾಗಿದೆ. ಒಟ್ಟು 10.27 ಲಕ್ಷ ಕೋಟಿ ರೂ. ಹೂಡಿಕೆಯಲ್ಲಿ ಶೇ.45ಕ್ಕೂ ಹೆಚ್ಚು ಉತ್ತರ ಕರ್ನಾಟಕದಲ್ಲಿ ಹೂಡಿಕೆಯಾಗಿದ್ದು ಮತ್ತು ಬೆಂಗಳೂರಿನಿಂದ ಹೊರಗೆ ಸುಮಾರು ಶೇ. 75ರಷ್ಟು ಹೂಡಿಕೆಯಾಗಿದ್ದು ಅಭಿವೃದ್ಧಿಯು ರಾಜ್ಯದೆಲ್ಲಡೆ ಪಸರಿಸಲಿದೆ.
ರಾಜ್ಯದ ಜಿಲ್ಲೆಗಳಿಗೂ ಭರಪೂರ ಯೋಜನೆ: ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ 1,000 ಕೋಟಿ ವೆಚ್ಚದ ಕುಡಿಯುವ ನೀರಿನ ಯೋಜನೆಗೆ ಕಾಂಗ್ರೆಸ್ ಸರ್ಕಾರ ಅನುಮೋದನೆ ನೀಡಿದೆ. ಸಂಡೂರು ವಿಧಾನಸಭಾ ಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳಿಗೆ 1,200 ಕೋಟಿ ರೂ. ನೀಡಿದೆ. ಚಿತ್ತಾಪುರ ಕ್ಷೇತ್ರದ 87 ಗ್ರಾಮಗಳನ್ನು 150 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದೆ. ಚನ್ನಪಟ್ಟಣದಲ್ಲಿ 300 ಕೋಟಿ ರೂಪಾಯಿ ಹೆಚ್ಚಿನ ಅನುದಾನದ ಅಭಿವೃದ್ಧಿ ಕಾಮಗಾರಿ ಕಾಂಗ್ರೆಸ್ ಸರ್ಕಾರ ಕೈಗೆತ್ತಿಕೊಂಡಿದೆ. ಏಳು ಜಿಲ್ಲೆಗಳ ಬರಪೀಡಿತ ಪ್ರದೇಶಗಳಾದ ಹಾಸನ, ಚಿಕ್ಕಮಗಳೂರು, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ ಮತ್ತು ರಾಮನಗರಕ್ಕೆ ನೀರು ಹರಿಸಲು 23,251 ಕೋಟಿ ವೆಚ್ಚದ ಎತ್ತಿನಹೊಳೆ ಯೋಜನೆಯ 1ನೇ ಹಂತವನ್ನು ಉದ್ಘಾಟಿಸಲಾಗಿದೆ. ರಾಜ್ಯದ 320 ಕಿಮೀ ಕರಾವಳಿಯನ್ನು ಪ್ಲಾಸ್ಟಿಕ್ ಮುಕ್ತ ಮಾಡಲು 840 ಕೋಟಿ ರೂ. ಯೋಜನೆಗೆ ಅನುಮೋದನೆ ನೀಡಲಾಗಿದೆ. ಕಲಬುರಗಿ, ಬೀದರ್ ಜಿಲ್ಲೆ ಕುಡಿಯುವ ನೀರಿಗೆ 7,200 ಕೋಟಿ ರೂ. ಯೋಜನೆಗೆ ಅನುಮೋದನೆ. ಉತ್ತರ ಕರ್ನಾಟಕದ ಅಭಿವೃದ್ಧಿಗಾಗಿ 3,740 ಕೋಟಿ ರೂ. ಯೋಜನೆಗೆ ಅನುಮೋದನೆ. 5ನೇ ಹಂತದ ಕಾವೇರಿ ಕುಡಿಯುವ ನೀರಿನ ಯೋಜನೆಗೆ ಚಾಲನೆ ನೀಡಲಾಗಿದೆ. BBMP ಯಲ್ಲಿ ಹೊಸದಾಗಿ ಸೇರ್ಪಡೆಗೊಂಡ 110 ಹಳ್ಳಿಗಳ ಅಡಿಯಲ್ಲಿ 4 ಲಕ್ಷಕ್ಕೂ ಹೆಚ್ಚು ಮನೆಗಳಿಗೆ ಹೆಚ್ಚುವರಿ 775 MLD ನೀರನ್ನು ಪೂರೈಸಲು ಈ ಯೋಜನೆಯನ್ನು 4,336 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ.
ಕಾಂಗ್ರೆಸ್ ಸರ್ಕಾರ 1500 ಕೋಟಿಯ ಕೊಟ್ಟಲಗಿ ಅಮ್ಮಾಜೇಶ್ವರಿ ಏತ ನೀರಾವರಿ ಯೋಜನೆಗೆ ಅನುಮೋದನೆ ನೀಡಿದೆ. ಕೃಷ್ಣಾ ಎಡದಂಡೆಯಿಂದ 2.903 Tmcft ನೀರನ್ನು ಎತ್ತುವ ಮೂಲಕ ಕೃಷಿ ಭೂಮಿಗಳಿಗೆ ನೀರು ತಲುಪಿಸುತ್ತಿದೆ ಈ ಯೋಜನೆಯು ತಾಲ್ಲೂಕಿನಲ್ಲಿ 95% ಭೂಪ್ರದೇಶಕ್ಕೆ ನೀರುಣಿಸುವ ಸಾಮರ್ಥ್ಯವನ್ನು ಹೊಂದಿದೆ.
ಎಫ್‌ಎಂಸಿಜಿ ಕ್ಲಸ್ಟರ್, ಕೊಪ್ಪಳದಲ್ಲಿ ಟಾಯ್ಸ್ ಕ್ಲಸ್ಟರ್, ಯಾದಗಿರಿಯಲ್ಲಿ ಬಲ್ಕ್ ಡ್ರಗ್ಸ್ ಪಾರ್ಕ್ ಮತ್ತು ರಾಮನಗರದಲ್ಲಿ ಎಲೆಕ್ನಿಕ್ ವಾಹನಗಳ ಕ್ಲಸ್ಟರ್‌ನಂತಹ ಉತ್ಪನ್ನ-ನಿರ್ದಿಷ್ಟ ಕೈಗಾರಿಕಾ ಕ್ಲಸ್ಟರ್‌ಗಳನ್ನು ಸ್ಥಾಪಿಸಲು ರಾಜ್ಯ ಸರ್ಕಾರದ ಶ್ರಮಿಸುತ್ತಿದೆ. ಕಾಂಗ್ರೆಸ್ ಸರ್ಕಾರ ಸೆಮಿಕಂಡಕ್ಟರ್ ಉದ್ಯಮದಲ್ಲಿ ಹೂಡಿಕೆಯನ್ನು ಆಕರ್ಷಿಸಲು 714.49 ಕೋಟಿ ರೂ.
ವೆಚ್ಚದ 901 ಎಕರೆಯಲ್ಲಿ ನಾಲ್ಕು ಸೆಮಿಕಂಡಕ್ಟರ್ ಕ್ಲಸ್ಟರ್‌ಗಳನ್ನು ಅಭಿವೃದ್ಧಿಪಡಿಸುತ್ತಿದೆ.
ಕೃಷಿ ಕ್ಷೇತ್ರ: ರಾಜ್ಯದಲ್ಲಿ ತೊಗರಿ ಉತ್ಪಾದನೆ ಉತ್ತೇಜನಕ್ಕೆ 88 ಕೋಟಿ ರೂ. ನೀಡಿ ಪ್ರೋತ್ಸಾಹಿಸಿದ ಕಾಂಗ್ರೆಸ್ ಸರ್ಕಾರ.
ಬೆಲೆ ಏರಿಕೆಯಿಂದ ಕಂಗೆಟ್ಟಿರುವ ರೈತರಿಗೆ 428 ಕೋಟಿ ರೂ ಸಹಾಯಧನದಿಂದ 50 ಸಾವಿರ ರೈತರಿಗೆ ಅನುಕೂಲವಾಗಿದೆ.
ರಾಜ್ಯದ ತೋಟಗಾರಿಕಾ ಬೆಳೆಗಾರರ ಹಿತ ಕಾಯುವ ಉದ್ದೇಶದಿಂದ ಕಾಂಗ್ರೆಸ್ ಸರ್ಕಾರ 6 ಜಿಲ್ಲೆಗಳಲ್ಲಿ ತೋಟಗಾರಿಕೆ ಕಿಸಾನ್ ಮಾಲ್ ಆರಂಭಿಸಿದ್ದು, 14 ಸಾವಿರ ಮೆ. ಟನ್ ಸಾಮರ್ಥ್ಯದ ಆರು ಶೀತಲ ಘಟಕ ನಿರ್ಮಿಸಿದೆ
2025 ಡಿಸೆಂಬರ್‌ನಲ್ಲಿ ಮುಂಗಾರು ಹಂಗಾಮಿನಲ್ಲಿ ಬೆಳೆ ನಷ್ಟ ಅನುಭವಿಸಿದ 14.21 ಲಕ್ಷ ರೈತರಿಗೆ 2,249 ಕೋಟಿ ರೂ. ಬೆಳೆ ಪರಿಹಾರ ನೀಡಲಾಗಿದೆ. ನೀರಿನ ಸಮರ್ಪಕ ನಿರ್ವಾಹಣೆ ಮತ್ತು ಕೃಷಿ ಉತ್ಪಾದನೆ ಹೆಚ್ಚಿಸಲು 1.81 ಲಕ್ಷ ರೈತರಿಗೆ ಹನಿ ಮತ್ತು ತುಂತುರು ನೀರಾವರಿ ಘಟಕ ಅಳವಡಿಕೆಗೆ 440 ಕೋಟಿ ರೂ. ನೀಡಿದ ಕಾಂಗ್ರೆಸ್ ಸರ್ಕಾರ.
2024ರಲ್ಲಿ ರಾಜ್ಯದ 236 ತಾಲೂಕುಗಳ ಪೈಕಿ 216 ತಾಲೂಕುಗಳು ಬರ ಪೀಡಿತದಿಂದ ನಷ್ಟವಾಗಿದ 18,177 ಕೋಟಿ ರೂ. ಬರ ಪರಿಹಾರವನ್ನು ಕೇಂದ್ರ ಸರ್ಕಾರಕ್ಕೆ ಕೊರಿದರು ನೀಡಲಿಲ್ಲ. ಕಾಂಗ್ರೆಸ್ ಸರ್ಕಾರ ತನ್ನ ಬೊಕ್ಕಸದಿಂದ 38 ಲಕ್ಷ ರೈತರಿಗೆ 4047 ಕೋಟಿ ರೂ. ನೀಡಿ ರೈತರಿಗೆ ನೆರವಾಗಿತ್ತು.
ಯುವಕರನ್ನು ಕೃಷಿಯೆಡೆಗೆ ಆಕರ್ಷಿಸಲು ತಂತ್ರಜ್ಞಾನ ಆಧಾರಿತ ಕೃಷಿಗೆ ಅದ್ಯತೆ ನೀಡಿ ಮತ್ತು ತರಬೇತಿ ನೀಡಲು ಆದ್ಯತೆ ನೀಡಿ ವಾತಾವರಣ ವೈಪರೀತ್ಯ ದಿಂದ ಸಂಕಷ್ಟ ದಲ್ಲಿರುವ ರೈತರಿಗೆ ಅನುಕೂಲ ಮಾಡಲು 1000 ಕೋಟಿಯಲ್ಲಿ 12000 ಕೃಷಿ ಹೊಂಡ ಮತ್ತು ಹನಿ ಮತ್ತು ಸೂಕ್ಷ್ಮ ನೀರಾವರಿ ಯೋಜನೆಯನ್ನು ತಂದು ರೈತರ ಬಾಳನ್ನು ಹಸನಾಗಿಸುತ್ತಿರುವ ಕಾಂಗ್ರೆಸ್ ಸರ್ಕಾರ.
ರೈತರಿಗೆ ಅನುಕೂಲವಾಗಲು ರಾಜ್ಯಾದ್ಯಂತ 6000 ಕಿರು ಆಹಾರ ಸಂಸ್ಕರಣಾ ಘಟಕಗಳ ಸ್ಥಾಪನೆ.
ಬೆಲೆ ಏರಿಕೆಯಿಂದ ಕಂಗೆಟ್ಟಿರುವ ರೈತರಿಗೆ 428 ಕೋಟಿ ರೂ ಸಹಾಯಧನ ಘೋಷಣೆ. ಈ ಯೋಜನೆಯಿಂದ 50 ಸಾವಿರ ರೈತರಿಗೆ ಅನುಕೂಲ.
ನೀರಿನ ಸಮರ್ಪಕ ನಿರ್ವಾಹಣೆ ಮತ್ತು ಕೃಷಿ ಉತ್ಪಾದನೆ ಹೆಚ್ಚಿಸಲು 1.81 ಲಕ್ಷ ರೈತರಿಗೆ ಹನಿ ಮತ್ತು ತುಂತುರು ನೀರಾವರಿ ಘಟಕ ಅಳವಡಿಕೆಗೆ 440 ಕೋಟಿ ರೂ. ಘೋಷಣೆ.
ರಾಜ್ಯದೆಲ್ಲೆಡೆ ಸುಮಾರು 9,60,578 ಹೆಕ್ಟೇರ್ ಬೆಳೆ ಹಾನಿಯಾಗಿದ್ದು ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ನಿಧಿ (NDRF) ಸೇರಿದಂತೆ ರಾಜ್ಯದ ವಿಶೇಷ ಅನುದಾನ ಸೇರಿಸಿ ಸುಮಾರು 2500 ಕೋಟಿಗೂ ಹೆಚ್ಚು ಪರಿಹಾರ ನೀಡಿದೆ.
ಆರೋಗ್ಯ ಕ್ಷೇತ್ರ: 2026-27 ಬಜೆಟ್‌ನಲ್ಲಿ ಆರೋಗ್ಯ ಕ್ಷೇತ್ರಕ್ಕೆ 17,473 ಕೋಟಿ ರೂ. ಮೀಸಲಿಟ್ಟಿದ್ದು ಕನ್ನಡಿಗರ ಆರೋಗ್ಯ ಸುಧಾರಣೆ ಪಣತೊಟ್ಟಿರುವ ಕಾಂಗ್ರೆಸ್ ಸರ್ಕಾರದಿಂದ ಭಾರತದಲ್ಲಿ ತಲಾ ಆರೋಗ್ಯ ವೆಚ್ಚದ ಪ್ರಥಮ 5 ರಾಜ್ಯಗಳಲ್ಲಿ ಕರ್ನಾಟಕವು ಒಂದಾಗಿದೆ. ಕಾಂಗ್ರೆಸ್ ಸರ್ಕಾರದ ದಿಟ್ಟ ಹೆಜ್ಜೆಯಿಂದ 2021ರಲ್ಲಿ ಶೇ.17 ರಷ್ಟಿದ್ದ ಶಿಶುಮರಣ ಪ್ರಮಾಣವು 2023ಕ್ಕೆ ಶೇ.14ಗೆ ಕುಸಿದಿದ್ದು ಇದರ ಜೊತೆಗೆ ತಾಯಿ ಮರಣ ಪ್ರಮಾಣ ತಡೆಗಟ್ಟಲು 320 ಕೋಟಿ ರೂ. ಅನುದಾನ ಮೀಸಲಿಟ್ಟಿದೆ. ದೇಶದಲ್ಲಿ ಮೊದಲ ಬಾರಿಗೆ ಮಾರುಕಟ್ಟೆಯಲ್ಲಿ ಗುಣಮಟ್ಟವಿಲ್ಲದ ಔಷಧಿಗಳನ್ನು ಪತ್ತೆಹಚ್ಚಲು ಮತ್ತು ಮಾದಕ ದ್ರವ್ಯಗಳು ಮತ್ತು ಮನೋವಿಕೃತ ಪದಾರ್ಥಗಳ (NDPS) ಔಷಧಿಗಳ ದುರುಪಯೋಗವನ್ನು ತಡೆಗಟ್ಟಲು ತಂತ್ರಜ್ಞಾನ ಆಧಾರಿತ ವ್ಯವಸ್ಥೆಯನ್ನು ಜಾರಿ ಮಾಡಿದೆ.
ಕನ್ನಡಿಗರ ತುರ್ತು ಆರೋಗ್ಯ ಸೇವೆಯಾದ 108 ಆಂಬುಲೆನ್ಸ್ ಸೇವೆಯನ್ನು ಬಲಪಡಿಸಲು ಖಾಸಗಿ ಸಂಸ್ಥೆ ನಿರ್ವಹಣೆಯ ನಿರ್ಲಕ್ಷಕ್ಕೆ ಬೇಸತ್ತಿದ್ದ ಕನ್ನಡಿಗರಿಗೆ ಸರ್ಕಾರದ ಆರೋಗ್ಯ ಇಲಾಖೆಯಡಿ ನಿರ್ವಹಣೆ ಮಾಡುವಂತೆ ಮಾಡಿದೆ. ಸರ್ಕಾರದ ಗುತ್ತಿಗೆ, ಹೊರಗುತ್ತಿಗೆ ಹಾಗೂ ಗೌರವಧನದ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ 3 ಲಕ್ಷ ನೌಕರರಿಗೆ 5 ಲಕ್ಷದವರೆಗೆ ಆರೋಗ್ಯ ವಿಮೆ ಸೌಲಭ್ಯ ಜಾರಿಗಿಳಿಸಿದ ಕಾಂಗ್ರೆಸ್ ಸರ್ಕಾರ
2023-24ರಲ್ಲಿ ಕರ್ನಾಟಕ NITI ಆಯೋಗ್‌ನ ಸುಸ್ಥಿರ ಅಭಿವೃದ್ಧಿ ಗುರಿ (SDG) ಸೂಚ್ಯಂಕದಲ್ಲಿ 5 ನೇ ಸ್ಥಾನಕ್ಕೇರಿದ್ದು ಆರೋಗ್ಯ ಗುಣಮಟ್ಟದಲ್ಲಿ ದೊಡ್ಡ ಗೆಲುವುಗಳನ್ನು ಸಾಧಿಸಿದೆ. 2018-19ರಲ್ಲಿ 8ನೇ ಸ್ಥಾನದಿಂದ 9ನೇ ಸ್ಥಾನಕ್ಕೆ ಇಳಿಸಿದ್ದು ಬಿಜೆಪಿಯ ಸಾಧನೆ.
ಕಾಂಗ್ರೆಸ್ ಸರ್ಕಾರ ಜೂನ್ 2024ರಲ್ಲಿ ಜನರು ಸೇವಿಸುವ ಗೋಬಿ ಮಂಚೂರಿ, ಪಾನಿಪುರಿ, ಕಬಾಬ್ ಸೇರಿ ಎಲ್ಲ ರೀತಿಯ ಖಾದ್ಯಗಳಲ್ಲಿ ಕೃತಕ ಬಣ್ಣ ಬಳಸುವುದನ್ನು ನಿಷೇಧಿಸಿ ಸುತ್ತೋಲೆ ಹೊರಡಿಸಿ ಜನರ ಆರೋಗ್ಯ ಸುದಾರಣೆಗೆ ದಿಟ್ಟ ಹೆಜ್ಜೆ ಇಟ್ಟಿದೆ.
ದೇಶದ GDPಗೆ 9% ಕೊಡುಗೆ ನೀಡುತ್ತಿರುವ ಕರ್ನಾಟಕಕ್ಕೆ ಬಲತುಂಬುವ 1.4 ಬೆಂಗಳೂರಿಗರಿಗೆ ಹೊಸ ಪ್ರತ್ಯೇಕ ಆರೋಗ್ಯ ನೀತಿ ತರಲು ಕಾಂಗ್ರೆಸ್ ಸರ್ಕಾರ ನಿರ್ಧರಿಸಿದೆ.
ತಾಯಂದಿರು ಮತ್ತು ನವಜಾತ ಶಿಶುಗಳ ಆರೈಕೆಯ ಗುಣಮಟ್ಟ ಮತ್ತು ಸುರಕ್ಷತೆಯನ್ನು ಸುಧಾರಿಸಲು ರಾಜ್ಯಾದ್ಯಂತ “Mission Zero Preventable Maternal Deaths" ಕಾರ್ಯಕ್ರಮದ ಜಾರಿ ಮಾಡಿದೆ.
ಬಾಣಂತಿಯರ ಸಾವಿಗೆ ಕಾರಣವಾಗಿದ್ದ ಕಳಪೆ ಔಷಧಿಯನ್ನು ಬ್ಯಾನ್ ಮಾಡುವುದರ ಜೊತೆಗೆ ಬಾಣಂತಿಯರ ಸಾವನ್ನು ಕಡಿಮೆ ಮಾಡಲು 2025-26ರ ಬಜೆಟ್‌ನಲ್ಲಿ 320 ಕೋಟಿ ರೂ. ನೀಡಿದೆ.
ಅಂತಾರಾಷ್ಟ್ರೀಯ ಮಟ್ಟದ ಆರೋಗ್ಯ ವ್ಯವಸ್ಥೆ ಕಲ್ಪಿಸಲು 413 ಕೋಟಿ ರೂ. ಸಮಗ್ರ ಆರೋಗ್ಯ ಯೋಜನೆ. ರಾಜ್ಯದ 8 ತಾಲ್ಲೂಕು ಆಸ್ಪತ್ರೆ ಹಾಗೂ 2 ಜಿಲ್ಲಾ ಆಸ್ಪತ್ರೆಗಳ ನವೀಕರಣಕ್ಕೆ 650 ಕೋಟಿ ರೂ. ಅನುದಾನ. ಹೊಸದಾಗಿ ಘೋಷಣೆಯಾಗಿರುವ 10 ತಾಲ್ಲೂಕುಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸಮುದಾಯ ಆರೋಗ್ಯ ಕೇಂದ್ರಗಳಾಗಿ ಉನ್ನತೀಕರಣ.
ಅನೀಮಿಯಾ ಮುಕ್ತ ರಾಜ್ಯವನ್ನಾಗಿಸಲು 185.74 ಕೋಟಿ ರೂ ವೆಚ್ಚದಲ್ಲಿ ಪೌಷ್ಠಿಕ ಕರ್ನಾಟಕ ಯೋಜನೆ.
ಗೃಹ ಆರೋಗ್ಯ ಯೋಜನೆಯಿಂದ 7 ಕೋಟಿ ಕನ್ನಡಿಗರಿಗೆ ಮನೆ-ಮನೆ ತೆರಳಿ ಆರೋಗ್ಯ ತಪಾಸಣೆ ಮಾಡಿ ಆರೋಗ್ಯದ ಭಾಗ್ಯ ತಂದಿದೆ.
ಕಾಂಗ್ರೆಸ್ ಸರ್ಕಾರ ಹೀಗಾಗಲೆ ಕಳಪೆ ಔಷಧಿ, ಆಹಾರದಲ್ಲಿ ಕೃತಕ ಬಣ್ಣ ಬಳಕೆ ಬ್ಯಾನ್ ಮಾಡುವುದರ ಜೊತೆಗೆ 185 ಕೋಟಿ ರೂ. ವೆಚ್ಚದಲ್ಲಿ "ಗೃಹ ಆರೋಗ್ಯ” ಯೋಜನೆಯಡಿ ಮನೆ ಮನೆಗೆ ಅರೋಗ್ಯ ತಪಾಸಣೆ ಮಾಡುತ್ತಿದೆ.
ಮೂರು ಹಂತದಲ್ಲಿ “ಗೃಹ ಆರೋಗ್ಯ* ಯೋಜನೆಯಡಿ ಆರೋಗ್ಯ ತಪಾಸಣೆ ಮಾಡಲಾಗುತ್ತಿದ್ದು ಮೊದಲ ಹಂತದಲ್ಲಿ ಆಶಾ ಕಾರ್ಯಕರ್ತೆ, ಸಮುದಾಯ ಆರೋಗ್ಯ ಅಧಿಕಾರಿಗಳಿಂದ ಪ್ರಾಥಮಿಕ ತಪಾಸಣೆ, ಎರಡನೇ ಹಂತದಲ್ಲಿ ತಪಾಸಣೆಯಲ್ಲಿ ಸಮಸ್ಯೆಗೆ ಉಚಿತ ರಕ್ತ ಪರೀಕ್ಷೆಗಳು, ಇಸಿಜಿ ಮತ್ತು ಔಷಧ ವಿತರಣೆ, ಮೂರನೇ ಹಂತದಲ್ಲಿ ಗಂಭೀರ ಕಾಯಿಲೆಗಳು, ಕ್ಯಾನ್ಸರ್ ದೃಢಪಟ್ಟರೆ ಜಿಲ್ಲಾಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಮಾಡಲಾಗುತ್ತದೆ.
ಈ ಕಾರ್ಯಕ್ರಮದಡಿ ಪ್ರತಿಯೊಂದು ತಾಲ್ಲೂಕು ಆಸ್ಪತ್ರೆ ಮತ್ತು ಉತ್ತಮವಾಗಿ ಕಾರ್ಯನಿರ್ವಹಿಸುವ ಸಮುದಾಯ ಆರೋಗ್ಯ ಕೇಂದ್ರ (CHC) 24/7 ಸಮಗ್ರ ತುರ್ತು ಸೇವೆ ಮತ್ತು ನವಜಾತ ಶಿಶು ಆರೈಕೆ (CEmONC) ಸೇವೆಗಳನ್ನು ಒದಗಿಸುವುದನ್ನು ಖಚಿತಪಡಿಸಿಕೊಳ್ಳುವ ಗುರಿಯನ್ನು ಹೊಂದಿದೆ.
ಪುತ್ತೂರು ತಾಲೂಕು ಆಸ್ಪತ್ರೆಯನ್ನು ಮೊಳಕಾಲ್ಲೂರಿನಲ್ಲಿ 200 ಹಾಸಿಗೆಗಳ ಹೊಸ ಆಸ್ಪತ್ರೆ ಮತ್ತು ವಿರಾಜಪೇಟೆಯಲ್ಲಿ 400 ಹಾಸಿಗೆಗಳ ಆಸ್ಪತ್ರೆಯನ್ನು ಮೇಲ್ದರ್ಜೆಗೊಳಿಸಲು ಘೋಷಣೆ.
ತಾಯಿ ಮರಣ ಪ್ರಮಾಣ ತಡೆಗಟ್ಟಲು 320 ಕೋಟಿ ರೂ. ಅನುದಾನ.
ಮಾನಸಿಕ ಅಸ್ವಸ್ಥರ ಆರೈಕೆಗೆ ಜಿಲ್ಲಾ ಮಟ್ಟದ ಆಸ್ಪತ್ರೆಗಳಲ್ಲಿ ಆರೈಕೆ ಕೇಂದ್ರಗಳ ಸ್ಥಾಪನೆ.
ಸಾಂಕ್ರಾಮಿಕ ರೋಗಗಳಾದ ಚಿಕೂನ್‌ಗುನ್ಯ, ಡೆಂಗ್ಯೂ ಹಾಗೂ ಮಲೆನಾಡು ಭಾಗದಲ್ಲಿ ಕಾಣಿಸಿಕೊಳ್ಳುವ ಕ್ಯಾಸನೂರು ಖಾಯಿಲೆ (KFD) ಮುಂಜಾಗ್ರತಾ ನಿಯಂತ್ರಣ ಕ್ರಮಗಳಿಗೆ 50 ಕೋಟಿ ರೂ.
"ಶ್ರವಣ ಸಂಜೀವಿನಿ" ಯೋಜನೆಯಡಿ ಕಾಕ್ಲಿಯರ್ ಇಂಪ್ಲಾಂಟ್ ಶಸ್ತ್ರಚಿಕಿತ್ಸೆ ಹಾಗೂ ಇಂಪ್ಲಾಂಟ್‌ಗಳ ಬಿಡಿಭಾಗಗಳ ನಿರ್ವಹಣೆಗೆ 12 ಕೋಟಿ ರೂ.
ಬ್ರಾಂಡ್ ಬೆಂಗಳೂರು ಅಡಿಯಲ್ಲಿ 1800 ಕೋಟಿ ವೆಚ್ಚದಲ್ಲಿ 21 ಅಭಿವೃದ್ಧಿ ಕಾರ್ಯಗಳು ಮತ್ತು ಅಂತರರಾಷ್ಟ್ರೀಯ ಮಟ್ಟದ ಆರೋಗ್ಯ ವ್ಯವಸ್ಥೆಗೆ 413 ಕೋಟಿ ರೂ. "ಸಮಗ್ರ ಆರೋಗ್ಯ ಯೋಜನೆ ರೂಪಿಸಿದೆ.
ಶಿಕ್ಷಣ ಕ್ಷೇತ್ರ: ಕರ್ನಾಟಕದಲ್ಲಿ ಐಟಿಐ ಮತ್ತು ಜಿಟಿಟಿಸಿಗಳ ಮೂಲಕ 33,000 ಕ್ಕೂ ಹೆಚ್ಚು ಯುವಕರಿಗೆ ತರಬೇತಿ ನೀಡಿದ್ದು, 1.4 ಲಕ್ಷಕ್ಕೂ ಹೆಚ್ಚು ಉದ್ಯೋಗಾವಕಾಶಗಳಿಗೆ ಸಿಗುವಂತೆ ಮಾಡಿದ ಕಾಂಗ್ರೆಸ್ ಸರ್ಕಾರ ಶಾಲಾ ವಿದ್ಯಾರ್ಥಿಗಳಲ್ಲಿ ವೃತ್ತಿ ಜಾಗೃತಿ ಮೂಡಿಸಲು "ನನ್ನ ವೃತ್ತಿ. ನನ್ನ ಆಯ್ಕೆ” (ನನ್ನ ವೃತ್ತಿ. ನನ್ನ ಆಯ್ಕೆ) ಅನ್ನು ಪ್ರಾರಂಭಿಸಿದೆ.
ಶಿಕ್ಷಕರ ಕೊರತೆಯಿಂದ ಶಾಲೆ ಬಿಡುವ ಮಕ್ಕಳ ಸಂಖ್ಯೆಯನ್ನು ಕಡಿಮೆ ಮಾಡಿ ಶಿಕ್ಷಣ ಕ್ಷೇತ್ರವನ್ನು ಬಲಪಡಿಸಲು ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ 40,000 ಮತ್ತು ಸರ್ಕಾರಿ ಪ್ರೌಢ ಶಾಲೆಗಳಿಗೆ 11,000 ಸೇರಿ ಒಟ್ಟು 51,000 ಅತಿಥಿ ಶಿಕ್ಷಕರನ್ನು ನೇಮಕಾತಿ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರ.
ಹಿಂದಿನ ಬಿಜೆಪಿ ಸರ್ಕಾರ ಶಾಲಾ ಕಾಲೇಜುಗಳಲ್ಲಿ ಹಿಜಾಬ್ ಸೇರಿದಂತೆ ಧಾರ್ಮಿಕ ಚಿಹ್ನೆಗಳ ಅನುಸರಣೆಯನ್ನು ನಿಷೇಧಿಸಿದ್ದ 2022ರ ಬಿಜೆಪಿ ಸರ್ಕಾರ ಆದೇಶವನ್ನು ಹಿಂಪಡೆದು ಕಾಂಗ್ರೆಸ್ ಸರ್ಕಾರ ಹೊಸ ಆದೇಶ ಹೊರಡಿಸಿದೆ.
1 ರಿಂದ 10 ತರಗತಿ ವರೆಗೆ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಶಾಲೆಗಳು ಮತ್ತು ಪದವಿ ಪೂರ್ವ ಕಾಲೇಜುಗಳ ವಿದ್ಯಾರ್ಥಿಗಳು ಜನಿವಾರ, ಪವಿತ್ರ ದಾರ, ಶಿವದಾರ, ರುದ್ರಾಕ್ಷಿ, ಪೇಟ ಅಥವಾ ಟರ್ಬನ್, ತಲೆ 26 ಸರ್ಕಾರಿ ಮಹಿಳಾ ಕಾಲೇಜುಗಳು ಸೇರಿದಂತೆ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು, ಪಾಲಿಟೆಕ್ನಿಕ್ ಹಾಗೂ ಪದವಿ ಕಾಲೇಜುಗಳ ಮೂಲಸೌಕರ್ಯ ಅಭಿವೃದ್ಧಿಗೆ 301 ಕೋಟಿ ರೂ. ಅನುದಾನ.
ಹೊಸದಾಗಿ ಪ್ರಾರಂಭಿಸಿದ ಪಾಲಿಟೆಕ್ನಿಕ್, ಇಂಜಿನಿಯರಿಂಗ್ ಕಾಲೇಜುಗಳಿಗೆ 10 ಕೋಟಿ ರೂ. ಅನುದಾನ.
ರಾಜ್ಯದ 16 ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ವೃತ್ತಿಪರ ವಿಷಯ ತಜ್ಞರನ್ನು 'Professor of Practice' ರನ್ನಾಗಿ ನೇಮಕ.
10 ಕೋಟಿ ರೂ. ವೆಚ್ಚದಲ್ಲಿ ಕಲ್ಯಾಣ ಕರ್ನಾಟಕ ಭಾಗದ 23 ಸಾವಿರ ವಿದ್ಯಾರ್ಥಿಗಳಿಗೆ ವಿಶೇಷ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮ ನೀಡಿದೆ.
ಕಲ್ಯಾಣ ಕರ್ನಾಟಕ: ಕಾಂಗ್ರೆಸ್ ಸರ್ಕಾರ 56 ಸಾವಿರ ಸರ್ಕಾರಿ ನೇಮಕಾತಿಗೆ ಚಾಲನೆ ನೀಡಿದ್ದು ಕಲ್ಯಾಣ ಕರ್ನಾಟಕಕ್ಕೆ 32 ಸಾವಿರ ಸರ್ಕಾರಿ ಉದ್ಯೋಗ ನೇಮಕಾತಿ ಮಾಡಲಾಗುತ್ತಿದೆ.
ಕಾಂಗ್ರೆಸ್ ಸರ್ಕಾರದ ಕಲ್ಯಾಣಪಥ ಯೋಜನೆಯಡಿ 1,000 ಕೋಟಿ ರೂ. ವೆಚ್ಚದಲ್ಲಿ ಗ್ರಾಮೀಣ ವಿಧಾನಸಭಾ ಕ್ಷೇತ್ರಗಳ 1,150 KM ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ.
ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ ಕಳೆದ ಮೂರು ವರ್ಷಗಳ ಅವಧಿಯಲ್ಲಿ 13,000 ಕೋಟಿ ರೂ.ವೆಚ್ಚದ ಅಭಿವೃದ್ಧಿ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗಿದೆ.
ಕಾಂಗ್ರೆಸ್ ಸರ್ಕಾರ 1685 ಕೋಟಿ ವೆಚ್ಚದಲ್ಲಿ ಕಲಬುರಗಿ ನಗರವನ್ನು ಸ್ಮಾರ್ಟ್ ಸಿಟಿಯನ್ನಾಗಿ ಅಭಿವೃದ್ಧಿಪಡಿಸಲು ನಿರ್ಧರಿಸಿದ್ದು ಇದರಿಂದ ಜನರ ಜೀವನದ ಗುಣಮಟ್ಟ ಮತ್ತು ಅಭಿವೃದ್ಧಿಯನ್ನು ಉತ್ತೇಜಿಸಲು ಸಹಕಾರಿಯಾಗಲಿದೆ.
ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಹೆಚ್ಚಿಸಲು 60 ಕೋಟಿ ರೂ. ವೆಚ್ಚದಲ್ಲಿ ಗ್ರಾಮೀಣ ಗೋದಾಮುಗಳ ನಿರ್ಮಾಣ
ಕಲ್ಯಾಣ ಕರ್ನಾಟಕದ ಅಂತರ್ಜಲ ಅಭಿವೃದ್ಧಿಗೆ 100 ಕೋಟಿ ರೂ ವೆಚ್ಚದಲ್ಲಿ ಸಣ ನೀರಾವರಿ ಇಲಾಖೆಯ ಸಹಭಾಗಿತ್ವದಲ್ಲಿ ಚೆಕ್ ಡ್ಯಾಂ ಹಾಗೂ ಬ್ರಿಡ್ಜ್ ಕಂ ಬ್ಯಾರೇಜ್‌ಗಳ ನಿರ್ಮಾಣ.
ಹೊಸ ತಾಲ್ಲೂಕುಗಳಲ್ಲಿ ಸುಭದ್ರ ಆಡಳಿತಕ್ಕಾಗಿ 160 ಕೋಟಿ ರೂ ವೆಚ್ಚದಲ್ಲಿ ಹೊಸ ಮಿನಿ ವಿಧಾನಸೌಧ ನಿರ್ಮಾಣಕ್ಕೆ ನಿರ್ಧಾರ.
ಅಕ್ಷರ ಆವಿಷ್ಕಾರ ಯೋಜನೆಯಡಿ 50 ಶಾಲೆಗಳನ್ನು ಕೆ.ಪಿ.ಎಸ್. ಶಾಲೆಗಳನ್ನಾಗಿ ಉನ್ನತೀಕರಣ ಮಾಡಲು 200 ಕೋಟಿ ರೂ. ಅನುದಾನ ನೀಡಿದೆ ಎಂದು ಗದಗ ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷರು ಹಾಗೂ ಗದಗ ತಾಲೂಕು ಪಂಚ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ಅಶೋಕ ಮಂದಾಲಿ ಅವರು ಪ್ರಕಟಣೆ ಮೂಲಕ ತಿಳಿಸಿದ್ದಾರೆ.
إرسال تعليق