⚡ಟ್ರೆಂಡಿಂಗ್ಸ್

ಗದಗ: ವಿದ್ಯಾರ್ಥಿಗಳಿಗೆ ನೋಟ್ಬುಕ್ ವಿತರಣೆ, ಪ್ರತಿಭಾವಂತರಿಗೆ ಸನ್ಮಾನ

ಗದಗ: ವಿದ್ಯಾರ್ಥಿಗಳಿಗೆ ನೋಟ್ಬುಕ್ ವಿತರಣೆ, ಪ್ರತಿಭಾವಂತರಿಗೆ ಸನ್ಮಾನ

ಗದಗ ನಗರದ ತಳಗೇರಿ ಓಣಿ (ಡಿ.ಸಿ. ಮಿಲ್), ವಾರ್ಡ್ 16ರಲ್ಲಿ ಗದಗ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಕೃಷ್ಣಗೌಡ ಎಚ್. ಪಾಟೀಲ ಅವರ ಹುಟ್ಟುಹಬ್ಬದ ಅಂಗವಾಗಿ ವಿಶೇಷ ಸೇವಾ ಕಾರ್ಯಕ್ರಮ ಆಯೋಜಿಸಲಾಯಿತು.

ಶ್ರೀ ಹೆಚ್.ಕೆ. ಪಾಟೀಲ ಸಾಹೇಬರ ಸೇವಾ ತಂಡದ ವತಿಯಿಂದ ಅಂಗನವಾಡಿ ಮಕ್ಕಳಿಗೆ ನೋಟ್ಬುಕ್, ಪೆನ್ನು ಹಾಗೂ ಅಂಕಲಿಪ್‌ಗಳನ್ನು ವಿತರಿಸಲಾಯಿತು. ಇದೇ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆಗೈದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಶ್ರೀ ಕೃಷ್ಣಗೌಡರು ಮಾತನಾಡಿ, ಸಮಾಜದಲ್ಲಿ ಶಿಕ್ಷಣದ ಮಹತ್ವವನ್ನು ಒತ್ತಿಹೇಳಿದರು. ಪ್ರತಿವರ್ಷವೂ ತಮ್ಮ ಹುಟ್ಟುಹಬ್ಬವನ್ನು ವಿನೂತನವಾಗಿ ಆಚರಿಸುವ ಉದ್ದೇಶದಿಂದ ಮಕ್ಕಳಿಗೆ ಉಪಯುಕ್ತವಾದ ಶಿಕ್ಷಣ ಸಾಮಗ್ರಿಗಳನ್ನು ನೀಡುವ ಮೂಲಕ ಸಮಾಜಮುಖಿ ಕಾರ್ಯಗಳಿಗೆ ಒತ್ತು ನೀಡುತ್ತಿರುವುದಾಗಿ ಹೇಳಿದರು.

ಸೇವಾ ತಂಡದ ಕ್ಯಾಪ್ಟನ್ ಮಲ್ಲಿಕಾರ್ಜುನ ಸಂಗಾಪುರ ಅವರ ನೇತೃತ್ವದಲ್ಲಿ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.

ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ಪರಶುರಾಮ್ ತಳಗೇರಿ, ವಿಜಯ ಕಲ್ಮನಿ, ಈರಪ್ಪ ಕೊಟ್ನಿಕಲ್, ವಿರುಪಾಕ್ಷಿ ಪರಾಪೂರ, ಎಸ್.ಎನ್. ಬಳ್ಳಾರಿ, ಅಶೋಕ್ ಕೊಡ್ತೀನಿ, ರವಿ ಕಟ್ಟಿಮನಿ, ಅಶೋಕ್ ಆದಿಮನಿ, ಪರಶುರಾಮ್ ಗೌಡ, ಪುಂಡ್ಲಿ ಕಲ್ಮನಿ, ರಾಘವೇಂದ್ರ ಪರಾಪೂರ, ಮೈಲಾರಪ್ಪ ಚಳ್ಳಮರದ, ಗಣೇಶ್ ಹುಬ್ಬಳ್ಳಿ, ಪರಶುರಾಮ ಸಂಗಾಪುರ, ಪೃಥ್ವಿ ಪರಾಪುರ, ಪಂಪಾಪತಿ ಅಗಸಿನಕೊಪ್ಪ, ನೀಲಪ್ಪ ಅಗಸಿನಕೊಪ್ಪ, ನಾಗರಾಜ್ ಸಂಗಾಪುರ, ಅಭಿಷೇಕ್ ಸಂಗಾಪುರ, ಜೀವನ್ ಪರಾಪೂರ ಸೇರಿದಂತೆ ಓಣಿಯ ಯುವಕರು, ಹಿರಿಯರು ಹಾಗೂ ಮಕ್ಕಳು ಭಾಗವಹಿಸಿದ್ದರು.

ಕಾರ್ಯಕ್ರಮವು ಸಾಮಾಜಿಕ ಬದ್ಧತೆಯೊಂದಿಗೆ ಶಿಕ್ಷಣಾಭಿವೃದ್ಧಿಗೆ ಕೈಜೋಡಿಸುವ ಸಂದೇಶ ನೀಡಿತು.

Post a Comment

أحدث أقدم
Loading...

Breaking News

ಭ್ರಷ್ಟರ ಬೇಟೆ
ಜಿಲ್ಲಾ ಸುದ್ದಿ is loading...