⚡ಟ್ರೆಂಡಿಂಗ್ಸ್

ಗಂಗಾವತಿ ಬಾಲಕಿಯರ ಕಾಲೇಜಿಗೆ ಭರ್ಜರಿ ಫಲಿತಾಂಶ ; 93.57% ಉತ್ತೀರ್ಣತೆ

ಗಂಗಾವತಿ ಬಾಲಕಿಯರ ಕಾಲೇಜಿಗೆ ಭರ್ಜರಿ ಫಲಿತಾಂಶ ; 93.57% ಉತ್ತೀರ್ಣತೆ

ಗದಗವಾಣಿ ಸುದ್ದಿಮೂಲ ಗಂಗಾವತಿ: ತಾಲೂಕಿನ ಪ್ರಸಿದ್ಧ ಶಿಕ್ಷಣ ಸಂಸ್ಥೆಯಾದ ಶ್ರೀ ಕೊಟ್ಟೂರೇಶ್ವರ ವಿದ್ಯಾವರ್ಧಕ ಸಂಘದ ಶ್ರೀಮತಿ ಹೆಚ್.ಆರ್. ಸರೋಜಮ್ಮ ಬಾಲಕಿಯರ ಪದವಿ ಪೂರ್ವ ಕಾಲೇಜು (ಪ್ರೌಢಶಾಲಾ ವಿಭಾಗ) ಈ ಸಾಲಿನ 2025-26ನೇ ಸಾಲಿನ ಸಾರ್ವಜನಿಕ ಪರೀಕ್ಷೆಯಲ್ಲಿ ಗಮನಾರ್ಹ ಸಾಧನೆ ಮಾಡಿದೆ.

ಈ ವರ್ಷ ಪರೀಕ್ಷೆಗೆ ಒಟ್ಟು 109 ವಿದ್ಯಾರ್ಥಿನಿಯರು ಹಾಜರಾಗಿದ್ದು, ಅವರಲ್ಲಿ 102 ಮಂದಿ ಉತ್ತೀರ್ಣರಾಗಿದ್ದಾರೆ. ಇದರೊಂದಿಗೆ ಕಾಲೇಜು 93.57% ಫಲಿತಾಂಶ ದಾಖಲಿಸಿ ಶೈಕ್ಷಣಿಕ ಕ್ಷೇತ್ರದಲ್ಲಿ ಮತ್ತೊಮ್ಮೆ ತನ್ನ ಮೇಲುಗೈ ಸಾಧಿಸಿದೆ.

ಪ್ರಮುಖ ಸಾಧನೆಗೈದ ವಿದ್ಯಾರ್ಥಿನಿಯರು:

ಕು. ಅನಿಜಾ — 564/625 (90.24%)

ಕು. ಶಾಹೀನ್ (ತಂದೆ: ಹಬೀಬ್ ರೆಹಮಾನ್) — 540/625 (86.40%)

ಅರ್ಚನಾ ತಂದೆ ಸುರೇಶ— 538/625 (86.08%)


ವಿದ್ಯಾರ್ಥಿನಿಯರ ಈ ಗಮನಾರ್ಹ ಸಾಧನೆಗೆ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಮ.ನಿ.ಪ್ರ ಕೊಟ್ಟೂರು ಮಹಾಸ್ವಾಮಿಗಳು, ಕಾರ್ಯದರ್ಶಿ ಶ್ರೀ ಶರಣೆಗೌಡ ಮಾಲಿಪಾಟೀಲ್, ಸಂಘದ ಸರ್ವ ಸದಸ್ಯರು, ಶಾಲೆಯ ಉಪಪ್ರಾಂಶುಪಾಲರು ಹಾಗೂ ಶಿಕ್ಷಕ ವೃಂದ ಹರ್ಷ ವ್ಯಕ್ತಪಡಿಸಿ ವಿದ್ಯಾರ್ಥಿನಿಯರಿಗೆ ಶುಭಾಶಯಗಳನ್ನು ತಿಳಿಸಿದ್ದಾರೆ.

ಸಂಸ್ಥೆಯ ಶಿಸ್ತುಬದ್ಧ ಶಿಕ್ಷಣ, ಶಿಕ್ಷಕರ ಸಮರ್ಪಿತ ಸೇವೆ ಮತ್ತು ವಿದ್ಯಾರ್ಥಿನಿಯರ ಪರಿಶ್ರಮ ಈ ಯಶಸ್ಸಿನ ಹಿಂದಿರುವ ಪ್ರಮುಖ ಕಾರಣಗಳೆಂದು ಅಭಿಪ್ರಾಯ ವ್ಯಕ್ತವಾಗಿದೆ.

1 تعليقات

إرسال تعليق

أحدث أقدم
Loading...

Breaking News

ಭ್ರಷ್ಟರ ಬೇಟೆ
ಜಿಲ್ಲಾ ಸುದ್ದಿ is loading...